
ಮ.ನಾ.ಪ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೊಡಿಯಾಲ್ ಗುತ್ತು ಪರಿಸರದ ಸಮಸ್ಯೆ
Friday, September 19, 2025
Edit
ಮಂಗಳೂರು: ಕೊಡಿಯಾಲ್ ಗುತ್ತು ಬಳಿ ಮಳೆ ನೀರು ಒಳಚರಂಡಿ ವ್ಯವಸ್ಥೆ ಇದ್ದರೂ ನೀರು ಹರಿದು ಹೋಗಲು ಹೂಳು ತೆಗೆಯದೆ ಇದ್ದುದರಿಂದ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ನೀರು ರಾಜಕಾಲುವೆಗೆ ಹರಿದು ಹೋಗಲು ಸಾಧ್ಯವಾಗದೇ ಇದ್ದುದ್ದರಿಂದ ನೀರು ಶೇಖರಣೆಯಾಗಿ ಪ್ಲಾಸ್ಟಿಕ್ ಹಾಗು ಇನ್ನಿತರ ತ್ಯಾಜ್ಯ ವಸ್ತು ಕೊಳೆತು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಡುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗವು ಬರಬಹುದೆಂಬ ಭಯ ಸ್ಥಳಿಯರಲ್ಲಿ. ಇನ್ನೊಂದು ಭಾಗದಲ್ಲಿ ಕುಡಿಯುವ ನೀರಿನ ಪೈಪ್ ಸಹಾ ಇದ್ದು ನೀರು ಹೊರಬರುತ್ತಿದ್ದು. ಪೈಪ್ ಚರಂಡಿಯ ಒಳಗೆ ಇರುವುದರಿಂದ ಪೈಪ್ ನಲ್ಲಿ ನೀರು ನಿಂತ ಸಮಯದಲ್ಲಿ ಈ ಕೊಳಚೆ ನೀರು ವಾಪಸ್ದು ಕುಡಿಯುವ ಪೈಪ್ ನ ಒಳಗೆ ಹೋಗುತ್ತಿದ್ದು, ಜನ ಸಾಮಾನ್ಯರ ಶುದ್ಧ ನೀರು ಕುಡಿಯಲು ಸಾಧ್ಯ ಆಗುತ್ತಿಲ್ಲ. ನೀರು ಮುಂದೆ ಹರಿಯದೆ ನಿಂತ ಕಾರಣ ಮಳೆಗಾಲದಲ್ಲಿ ನೀರು ಮನೆಯ ಅಂಗಳದಲ್ಲಿ ಕೃತಕ ನೆರೆ ಬಂದು ತೊಂದರೆ ಪಡುತ್ತಿದ್ದಾರೆ. ಪಾಲಿಕೆ ಗೆ ಹಲವು ಬಾರಿ ದೂರು ಸಲ್ಲಿಸಿದ್ದೇವೆ ಅಧಿಕಾರಿಗಳು ಬರುತ್ತಾರೆ ಮೇಲ್ನೋಟಕ್ಕೆ ಕೆಲಸ ಮಾಡಿ ಹೋಗುತ್ತಾರೆ. ಆದ್ರೆ ಯಾವುದೂ ಕಾರ್ಯಗತ ಆಗುತ್ತಿಲ್ಲ. ಆದ್ದರಿಂದ ಆದಷ್ಟು ಬೇಗ ಪಾಲಿಕೆಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಿ ಕೊಡಬೇಕಾಗಿ ಸ್ಥಳಿಯರ ಬೇಡಿಕೆಯಾಗಿದೆ.