ಪಿಲಿಕುಳದಲ್ಲಿ ಬಾಹುಬಲಿ ಮತ್ತು ಅನುಷ್ಕ ಗೆ ಎರಡನೇ ಕರು
Monday, January 17, 2022
Edit
ಮಂಗಳೂರು; ಪಿಲಿಕುಳ ಜೈವಿಕ ಉದ್ಯಾನವನದ ಕಾಡುಕೋಣ ' ಬಾಹುಬಲಿ ' ಮತ್ತು ' ಅನುಷ್ಠ ' ಒಂದು ಗಂಡು ಕರುವಿಗೆ ಜನ್ಮ ನೀಡಿದೆ .
ತಾಯಿ ಮತ್ತು ಕರು ಆರೋಗ್ಯಕರವಾಗಿದೆ . ಈ ಹಿಂದೆ 2020 ಸಾಲಿನಲ್ಲಿ ' ಪಾರೋಲು ' ಎಂಬ ಹೆಣ್ಣು ಕರುವಿಗೆ ಜನ್ಮ ನೀಡಿತ್ತು . ' ಬಾಹುಬಲಿ ' ಮತ್ತು ' ಅನುಷ್ಠ ' ತಮಿಳುನಾಡಿನ ವಂಡಲೂರು ಮೃಗಾಲಯದಿಂದ ಹಾಗೂ ' ಮಹಿಷ ' ಮತ್ತು ' ಮಹಿಷಿ ' ಯನ್ನು ಮೈಸೂರು ಮೃಗಾಲಯದಿಂದ ಪ್ರಾಣಿ ವಿನಿಮಯದ ಮುಖೇನ ತರಿಸಲಾಗಿತ್ತು . ಈಗ ಪಿಲಿಕುಳದಲ್ಲಿ ಒಟ್ಟು ಆರು ಕಾಡುಕೊಣಗಳಿವೆ . ಕಾಡುಕೊಣಗಳು ( Indian Gaur ) ಅಳಿವಿನಂಚಿನಲ್ಲಿರುವ ಪಾಣಿಗಳ ಸಾಲಿಗೆ ಸೇರಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್ ಜೆ ಭಂಡಾರಿ ತಿಳಿಸಿದ್ದಾರೆ