ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫ್ರೆಶರ್ಸ್ ಡೇ, ಬ್ರಾಂಚ್ ಎಂಟ್ರಿ, ವಿದ್ಯಾರ್ಥಿ ಕೌನ್ಸಿಲ್ ಉದ್ಘಾಟನೆ

ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫ್ರೆಶರ್ಸ್ ಡೇ, ಬ್ರಾಂಚ್ ಎಂಟ್ರಿ, ವಿದ್ಯಾರ್ಥಿ ಕೌನ್ಸಿಲ್ ಉದ್ಘಾಟನೆ

ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫ್ರೆಶರ್ಸ್ ಡೇ, ಬ್ರಾಂಚ್ ಎಂಟ್ರಿ, ವಿದ್ಯಾರ್ಥಿ ಕೌನ್ಸಿಲ್ ಉದ್ಘಾಟನೆ ಗುರುವಾರ ಡಾ. ಪಿ. ದಯಾನಂದ ಪೈ- ಸತೀಶ್ ಪೈ ಅಡಿಟೋರಿಯಂನಲ್ಲಿ ನಡೆಯಿತು. ಕಾಲೇಜಿನ ಸಂಚಾಲಕ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಉದ್ಘಾಟನೆ ನೆರವೇರಿಸಿ ಯುವ ಸಮೂಹ ಉತ್ಸಾಹೀ, ಕ್ರಿಯಾಶೀಲ ಕಲಿಕೆಯ ಜತೆಗೆ ನಾಯಕತ್ವ ಗುಣಗಳೊಂದಿಗೆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದು ಶುಭ ಹಾರೈಸಿದರು.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ. ಪ್ರಿಯಾ ವಿ. ಫ್ರ್ಯಾಂಕ್ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ಶುಭ ಹಾರೈಸಿದರು. ಉಪ ಪ್ರಾಂಶುಪಾಲ ಡಾ. ಡೇಮಿಯನ್ ಎ. ಡಿಮೆಲ್ಲೋ, ವಿದ್ಯಾರ್ಥಿ ಕೌನ್ಸಿಲ್ ಪದಾಧಿಕಾರಿಗಳು, ಉಪಸ್ಥಿತರಿದ್ದರು.
ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ಆದಿತ್ಯ ಭಕ್ತ ಸ್ವಾಗತಿಸಿದರು. ಮಣೇಲ್ ಓಂ ನಾಯಕ್ ವಿದ್ಯಾರ್ಥಿ ಕೌನ್ಸಿಲ್ ಪದಾಧಿಕಾರಿಗಳ ವಿವರ ನೀಡಿದರು.
ತಾಂತ್ರಿಕ ವಿಭಾಗ ಕಾರ್ಯದರ್ಶಿ ಸುಶಾಂತ್ ಸಿಂಗ್ ವಿದ್ಯಾರ್ಥಿಗಳ ವಿವಿಧ ಕ್ಲಬ್ ಚಟುವಟಿಕೆಗಳ ಕುರಿತ ವಿವರ ನೀಡಿದರು. ವಿದ್ಯಾರ್ಥಿ ಕೌನ್ಸಿಲ್ ಉಪಾಧ್ಯಕ್ಷೆ ತೇಜಸ್ವೀ ನಾಯಕ್ ವಂದಿಸಿದರು. ಅನೋರಾ ಎ.ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article