
ಮಂಗಳೂರು: ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ ದಿಂದ ಮ್ರತಪಟ್ಟ ಚಾಲಕ
Wednesday, February 2, 2022
Edit
ಮಂಗಳೂರು: ಪಾಂಡೇಶ್ವರ ನಿವಾಸಿ ಮೊಹಮ್ಮದ್ ಶರೀಫ್ (57) ಮೃತಪಟ್ಟ ದುರ್ದೈವಿ. ಹಲವಾರು ವರ್ಷಗಳಿಂದ ಇವರು ಮಂಗಳೂರು ನಗರದಲ್ಲಿ ಟ್ಯಾಕ್ಸಿ ಚಲಾಯಿಸುತ್ತಿದ್ದು, ಇಂದು ಮಧ್ಯಾಹ್ನದ ವೇಳೆ ಕಾರು ಚಲಾಯಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಮಂಗಳಾದೇವಿ ದೇವಸ್ಥಾನದ ಬಳಿ ಕಾರು ಚಲಾಯಿಸುತ್ತಿರುವ ಸಂದರ್ಭ ಕಾರು ಚಾಲಕರಾದ ಶರೀಫ್ ರವರಿಗೆ ಹೃದಯಾಘಾತ ವಾಗಿದೆ. ಚಲಾಯಿಸುತ್ತಿದ್ದ ಕಾರನ್ನು ನಿಲ್ಲಿಸಲು ಸಾಧ್ಯವಾಗದೇ ನಿಯಂತ್ರಣ ತಪ್ಪಿದ್ದು,
ತನ್ನ ಕಾರಿನಿಂದಾಗಿ ಬೈಕ್, ಟೆಂಪೋ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಕಾರು ಚಾಲಕ ಶರೀಫ್ ರವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ. ಮಂಗಳೂರು ಪಶ್ಚಿಮ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.