
ಜಾತಿ ಗಣತಿ ವೇಳೆ ಮರಾಠ ಜಾತಿಯೆಂದು ನಮೂದಿಸಲು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಆಗ್ರಹ - ಸುರೇಶ್ ರಾವ್
Friday, September 19, 2025
Edit
ಮಂಗಳೂರು: ರಾಜ್ಯದಲ್ಲಿ ಹಿಂದುಳಿದ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ತೀರ್ಮಾನಿಸಿದ್ದು ರಾಜ್ಯದಲ್ಲಿರುವ ಮರಾಠ ಸಮುದಾಯ ಬಾಂಧವರು ಧರ್ಮವನ್ನು ಹಿಂದು ಎಂದು, ಜಾತಿಯನ್ನು ಮರಾಠವೆಂದು, ಉಪ ಜಾತಿಯನ್ನು ಕುಣುಬಿ ಎಂದು, ಮಾತೃ ಭಾಷೆಯನ್ನು ಮರಾಠಿ ಎಂದು ಸಮೀಕ್ಷೆಗೆ ಬರುವಾಗ ನಮೂದಿಸಬೇಕೆಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ರಾವ್ ಕೋರಿಕೊಂಡರು.
ಅವರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಕೇರಳ ಮತ್ತು ಇತ್ತರ ಕೆಲವು ಕಡೆಗಳಲ್ಲಿ ಮರಾಠ ಜನಾಂಗದವರು ಆರ್ಯ ಎಂಬುದಾಗಿ ಕರೆಸಿಕೊಳ್ಳುತ್ತಾರೆ. ಕಾಲಾನಂತರದಲ್ಲಿ ಅವರು ವಿವಿಧ ಉದ್ದೇಶಗಳಿಗಾಗಿ ಕರ್ನಾಟಕಕ್ಕೆ ಬಂದು ನೆಲೆಸುತ್ತಾರೆ. ಈ ಭಾಗಕ್ಕೆ ಆಗಮಿಸಿದ ಆರ್ಯರು ರಾಜ್ಯ ಸಮೀಕ್ಷೆಯ ಸಮಯದಲ್ಲಿ ಆರ್ಯ ಮತ್ತು ಮರಾಠ ಎನ್ನುವ ಎರಡು ಜಾತಿ ಕಾಲಂನಿಂದ ಗೊಂದಲ ಪಡದೆ ಆರ್ಯರು ಮರಾಠವೆಂದು ನಮೂದಿಸಿಕೊಳ್ಳಬೇಕೆಂದು ಕೋರಿಕೊಂಡರು. ಸುದ್ದಿಗೋಷ್ಠಿಯಲ್ಲಿ ಪರಿಷತ್ ನ ಮುಖಂಡರಾದ ಎಬಿ ಚಂದ್ರಶೇಖರ್, ನಾಗೇಶ್ ಎನ್ ಪಾಟೀಲ್, ಗುರುರಾಜ್, ಭಾಗ್ಯಲಕ್ಷ್ಮಿ ಸುಧಾಕರ್ ಸಿಂಧ್ಯಾ ಮುಂತಾದವರು ಉಪಸ್ಥಿತತರಿದ್ದರು.