
ಬೀದಿಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ
Monday, September 19, 2022
Edit
ನಗರದ ಲಾಲ್ ಬಾಗ್ ಹಾಗೂ ಕೆ.ಎಸ್.ಆರ್.ಟಿ.ಸಿ ಸುತ್ತಮುತ್ತಾ ಅನಧಿಕೃತ ಬೀದಿಬದಿ ವ್ಯಾಪಾರಸ್ಥರಿಂದ ಸಾರ್ವಜನಿಕರಿಗೆ ಆಗುವ ತೊಂದರೆಯಿಂದಾಗಿ ಪಾಲಿಕೆ ಅಧಿಕಾರಿಗಳಿಂದ ತೆರವು ಕಾರ್ಯಚರಣೆ ನಡೆಸಲಾಯಿತು.
ನಗರದ ಲಾಲ್ ಭಾಗ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಪರಿಸರದ ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಹೂವಿನ ವ್ಯಾಪರ ಮಾಡುತ್ತಿದ್ದು ಇದರಿಂದ ಪಾದಚಾರಿಗಳಿಗೆ ನಡೆದು ಕೊಂಡು ಹೋಗಲು ಅನಾನುಕೂಲವಾಗುತ್ತಿದ್ದು ಹಾಗೂ ವಾಹನ ಸವಾರರಿಗೂ ತೊಂದರೆ ಆಗುತ್ತಿತ್ತು. ವ್ಯಾಪಕವಾಗಿ ಬಂದ ದೂರಿನ ಹಿನ್ನೆಲೆ ಪಾಲಿಕೆ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಎತ್ತಂಗಡಿ ಮಾಡಿದ ಘಟನೆ ಇಂದು ಬೆಳಿಗ್ಗೆ ನಡೆಯಿತು.