ಕಾಂಗ್ರೆಸ್ ನಾಯಕರ ಕಾಲರ್ ಪಟ್ಟಿ ಹಿಡಿಯುವ ದಿನ ಶೀಘ್ರದಲ್ಲೇ ಬರುತ್ತೆ - ಶಾಸಕ ಕಾಮತ್

ಕಾಂಗ್ರೆಸ್ ನಾಯಕರ ಕಾಲರ್ ಪಟ್ಟಿ ಹಿಡಿಯುವ ದಿನ ಶೀಘ್ರದಲ್ಲೇ ಬರುತ್ತೆ - ಶಾಸಕ ಕಾಮತ್

ಮಂಗಳೂರು: ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ: ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಗೆಹರಿಯದ ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಕಾಂಗ್ರೆಸ್ ಸರಕಾರದ ವಿರುದ್ಧ ಮಂಗಳವಾರ ಬೃಹತ್ ಪ್ರತಿಭಟನಾ ಧರಣಿ ನಡೆಯಿತು. ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಗೆ ನೇರ ಕಾರಣವಾಗಿ ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ತಂದೊಡ್ಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಮಂಗಳೂರಿನ ಮಿನಿ ವಿಧಾನ ಸೌಧದ ಬಳಿ ನಡೆದ ಪ್ರತಿಭಟನೆಯು ಮುಂಜಾನೆ 9 ಗಂಟೆಗೆ ಆರಂಭಗೊಂಡಿದ್ದು ನಂಜೆ 5 ಗಂಟೆಯವರೆಗೆ ಮುಂದುವರಿಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಹಿತ ಬಿಜೆಪಿ ನಾಯಕರು ಖಾಲಿ ಬುಟ್ಟಿ, ಹಾರೆ, ಪಿಕ್ಕಾಸು ಹಿಡಿದುಕೊಂಡು ಪ್ರತಿಭಟನೆಗೆ ಚಾಲನೆ ನೀಡಿ, ರಾಜ್ಯ ಸರಕಾರದ ವಿರುದ್ಧ, ದಿನೇಶ್ ಗುಂಡೂರಾವ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ , ಕಾಂಗ್ರೆಸ್ ನಾಯಕರು ಬೀದಿ ಬೀದಿಯಲ್ಲಿ ಕಂಡಾಗ ಕಾಲರ್ ಪಟ್ಟಿ ಹಿಡಿದು ಹೊರಗೆ ಬಿಸಾಡುವ ದಿನ ದೂರವಿಲ್ಲ. ಅಲ್ಲದೆ ಜಿಲ್ಲೆಯ ಸಚಿವರು ಕಾಣೆಯಾಗಿದ್ದಾರೆ. ನಮ್ಮ ಜಿಲ್ಲೆಯ ಸ್ಪೀಕರ್ ವಿದೇಶದಲ್ಲಿ ಇದ್ದಾರೆ. ಸಮಸ್ಯೆಯನ್ನ ಬಗೆಹರಿಸದೆ 30 ಬಾರಿ ವಿದೇಶ ಪ್ರಯಾಣ ಮಾಡ್ತಾರೆ ಇವರನ್ನ ಕಿತ್ತು ಬಿಸಾಡಬೇಕು. ಕೆಂಪು ಕಲ್ಲು, ಮರಳು ಸಮಸ್ಯೆ ಬಗ್ಗೆ ರಾಜ್ಯದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವರಿಕೆ ಮಾಡುವ ಕೆಲಸ ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ. ಆದರೆ ಏನೂ ಫಲಪ್ರದವಾಗಿಲ್ಲ. ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಸರಕಾರ ಸೃಷ್ಟಿಸಿರುವ ಸಮಸ್ಯೆಯಾಗಿದೆ. ಸರಕಾರ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ. ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಹಾಗೂ ಸ್ಪೀಕರ್ ಯು ಟಿ ಖಾದರ್ ಅವರು ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಹರಿಹಾಯ್ದರು.
ಪ್ರತಿಭಟನೆಯಲ್ಲಿ ಬಂದರು ಬಂದರು ಗುಂಡೂರಾಯರು, ತಿಂಗಳಿಗೆ ಒಮ್ಮೆಯೂ ಕಾಣದಾದರೂ ಗೀತೆಯನ್ನ ಪ್ರತಿಭಟನಾ ನಿರತರು ಹಾಡಿ ಟ್ರೋಲ್ ಮಾಡುತಿದ್ದರು.

Click here for YouTube video
 
ಪ್ರತಿಭಟನೆಯಲ್ಲಿ ಸಂಸದ ಬ್ರೀಜೇಶ್ ಚೌಟ, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಎಂಎಲ್‌ಸಿ ಕಿಶೋರ್ ಕುಮಾ‌ರ್ ಪುತ್ತೂರು, ಕ್ಯಾ.ಗಣೇಶ್ ಕಾರ್ಣಿಕ್ ಸೇರಿದಂತೆ ಬಹಳಷ್ಟು ಸಂಖ್ಯೆಯ ಕಾರ್ಯಕರ್ತರು ನೆರೆದಿದ್ದರು.

Ads on article

Advertise in articles 1

advertising articles 2

Advertise under the article