ಗೇಲ್ ಕಂಪೆನಿ ತೆಗೆದಿಟ್ಟ ಪೈಪ್ ಲೈನ್ ಹೊಂಡಕ್ಕೆ ಬಿದ್ದ ನಾಯಿಯ ರಕ್ಷಣೆ

ಗೇಲ್ ಕಂಪೆನಿ ತೆಗೆದಿಟ್ಟ ಪೈಪ್ ಲೈನ್ ಹೊಂಡಕ್ಕೆ ಬಿದ್ದ ನಾಯಿಯ ರಕ್ಷಣೆ

ಮಂಗಳೂರು ಸೆಪ್ಟೆಂಬರ್ 17: ಗ್ಯಾಸ್ ಲೈನ್ ಕಂಪೆನಿ ಗೇಲ್ ತೆಗೆದಿಟ್ಟ ಹೊಂಡಕ್ಕೆ ನಾಯಿಯೊಂದು ಬಿದ್ದ ಘಟನೆ ಮಲ್ಲಿಕಟ್ಟೆ ಬಳಿ ನಡೆದಿದೆ.
ಗೇಲ್ ಕಂಪೆನಿ ಗ್ಯಾಸ್ ಪೈಪ್ ಲೈನ್ ನ ವಾಲ್ ಗಾಗಿ ಮಾಡಿದ್ದ ಛೆಂಬರ್ ನ್ನು ಮುಚ್ಚದೆ ಹಾಗೆ ಬಿಟ್ಟಿದ್ದಾರೆ. ಇದರಿಂದಾಗಿ ನಾಯಿಯೊಂದು  ಅದರೊಳಗೆ ಬಿದ್ದು, ಅದರಿಂದ ಹೊರಗೆ ಬರಲಾಗದೇ ಒದ್ದಾಡುತ್ತಿತ್ತು.

 ಸ್ಥಳೀಯರು ಅನಿಮಲ್ ಕೇರ್ ಟ್ರಸ್ಟ್‌ ಗೆ  ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅನಿಮಲ್ ಕೇರ್ ಟ್ರಸ್ಟ್‌ ನ ಸಿಬ್ಬಂದಿ ನಾಯಿಯ ರಕ್ಷಣೆ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article