ಧರ್ಮಸ್ಥಳ ಕೇಸನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಕ್ಯಾಬಿನೆಟ್ ನಲ್ಲಿ ಚರ್ಚಿಸಿ ನಿರ್ಧಾರ: ಅಮಿತ್ ಶಾ ಪ್ರತಿಕ್ರಿಯೆ.
Thursday, September 4, 2025
Edit
ನವದೆಹಲಿ: ಧರ್ಮಸ್ಥಳ ಪ್ರಕರಣ (Darmasthala Case) ಸಂಬಂಧ ಕರ್ನಾಟಕದ ಸ್ವಾಮಿಜಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ರವರನ್ನು ಬೇಟಿಯಾಗಿದ್ದು, ಪ್ರಕರಣ ಎನ್ಐಎ ತನಿಖೆಗೆ ವಹಿಸಬೇಕೆಂದು ಕೇಂದ್ರ ಗೃಹ ಸಚಿವರಲ್ಲಿ ಮನವಿ ಮಾಡಿದರು.
ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮಿಜಿ ನೇತ್ರತ್ವದಲ್ಲಿ ಸನಾತನ ಸಂತ ನಿಯೋಗವು ದೆಹಲಿ ತೆರಳಿ ಕೇಂದ್ರ ಗೃಹಸಚಿವರನ್ನು ಬೇಟಿಯಾಗಿ ಮನವಿ ಸಲ್ಲಿಸಿದರು.
ಮಂಗಳೂರಿನ ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಉಪಸ್ಥಿತಿಯಲ್ಲಿ ವಿವಿಧ ಪೀಠಗಳ 8 ಸ್ವಾಮೀಜಿಗಳ ನಿಯೋಗದಲ್ಲಿದ್ದರು.