ಕೈಕೊಟ್ಟ ಇಂಜಿನ್:  ಉಳ್ಳಾಲ ತೀರದ ಕಲ್ಲು ಬಂಡೆಗೆ ಬಡಿದು ಪಲ್ಟಿ ಹೊಡೆದ ಮೀನುಗಾರಿಕಾ ಬೋಟ್

ಕೈಕೊಟ್ಟ ಇಂಜಿನ್: ಉಳ್ಳಾಲ ತೀರದ ಕಲ್ಲು ಬಂಡೆಗೆ ಬಡಿದು ಪಲ್ಟಿ ಹೊಡೆದ ಮೀನುಗಾರಿಕಾ ಬೋಟ್

ಮಂಗಳೂರು: ಬಂಡೆಯ ಮೇಲೆ ಮೀನುಗಾರಿಕಾ ದೋಣಿ ಮಗುಚಿ, 13 ಮೀನುಗಾರರ ಜೀವ ರಕ್ಷಣೆ, ದೋಣಿ ಸಂಪೂರ್ಣ ಹಾನಿ, ಕೋಟಿಗೂ ಹೆಚ್ಚು ನಷ್ಟ. ಹಠಾತ್ತನೇ ಇಂಜಿನ್ ಆಫ್ ಆದ ಪರಿಣಾಮ ಮೀನುಗಾರಿಕಾ ಬೋಟ್ ಒಂದು ಸಮುದ್ರ ತಟದ ಕಲ್ಲು ಬಂಡೆಗಳಿಗೆ ಬಡಿದು ಪಲ್ಟಿ ಹೊಡೆದ ಘಟನೆ ಉಳ್ಳಾಲ ಸೀಗೌಂಡಲ್ಲಿ ಇಂದು ಮುಂಜಾನೆ ನಡೆದಿದೆ.
ಅಸ್ಪಾಕ್ ಎಂಬವರ ಮಾಲಕತ್ವದ ಬುರಖ್ ಹೆಸರಿನ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿದೆ. ಇಂದು ಮುಂಜಾನೆ 2.30 ಗಂಟೆಗೆ ಮಂಗಳೂರಿನ ಧಕ್ಕೆಯಿಂದ ಹದಿಮೂರು ಮಂದಿಯನ್ನ ಹೊತ್ತ ಬೋಟ್ ಮೀನುಗಾರಿಕೆಗೆ ತೆರಳಿದ್ದ ವೇಳೆ ಉಳ್ಳಾಲ ಸೀಗ್ರೌಂಡ್ ಬಳಿ ಬೋಟ್ ನ ಇಂಜಿನ್ ಹಠಾತ್ತಾಗಿ ಆಫ್ ಆಗಿದೆ. ಈ ವೇಳೆ ನಿಯಂತ್ರಣ ಕಳಕೊಂಡ ಬೋಟ್ ತೀರ ಪ್ರದೇಶದಲ್ಲಿ ಕಡಲ್ಗೊರೆತದ ತಾತ್ಕಾಲಿಕ ತಡೆಗೆಂದು ಹಾಕಲಾಗಿದ್ದ ಕಲ್ಲು ಬಂಡೆಗಳಿಗೆ ಬಡಿದು ಪಲ್ಟಿ ಹೊಡೆದಿದೆಯೆಂದು ಬೋಟ್ ನ ವ್ಯವಸ್ಥಾಪಕರಾದ ಖಲೀಲ್ ಅವರು ಮಾಹಿತಿ ನೀಡಿದ್ದಾರೆ.
ಘಟನೆಯಿಂದ ಬೋಟ್ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಮೀನಿನ ಬಲೆ, ಇನ್ನಿತರ ಬೆಲೆಬಾಳುವ ಸೊತ್ತು ಸೇರಿ ಸುಮಾರು ಒಂದೂವರೆ ಕೋಟಿಯಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article