
ತಿಮರೋಡಿ ಗಡಿಪಾರು ವಿಚಾರ ಬಿಜೆಪಿಯನ್ನು ತದಕಿದ ಖರ್ಗೆ...
Wednesday, September 24, 2025
Edit
ಮಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ವಿಚಾರವಾಗಿ ಮಂಗಳೂರಿನಲ್ಲಿ ಮಾತನಾಡಿದ ಸಚಿವ ಪ್ರಿಯಾಂಕಾ ಖರ್ಗೆ, ಗಡಿಪಾರು ಆದೇಶ ಕಾನೂನು ಪ್ರಕಾರ ಆಗುತ್ತದೆ. ಯಾರನ್ನಾದ್ರು ಗಡಿಪಾರು ಮಾಡಬೇಕಾದರೆ ಸುಮ್ಮನೆ ಗಡಿಪಾರು ಮಾಡ್ಲಿಕ್ಕೆ ಆಗುದಿಲ್ಲ ಅದಕ್ಕೆ ಕೆಲವೊಂದು ಮಾನದಂಡಗಳು ಇರ್ತವೆ.
ಆದ್ರೆ ಬಿಜೆಪಿಯವರಿಗೆ ಯಾಕೆ ನೋವು? ಇಡೀ ಪ್ರಕರಣ RSS ವರ್ಸಸ್ RSS ಇದೆ. ಸುಮ್ನೆ ಸರ್ಕಾರವನ್ನು ಯಾಕೆ ಮಧ್ಯೆ ತರ್ತೀರಿ. ಒಬ್ಬ ವ್ಯಕ್ತಿ ಬಂದು ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ರು. ಈ ಬಗ್ಗೆ ಕ್ರಮ ಕೈಗೊಳ್ಳುವುದು ನಮ್ಮ ಜವಾಬ್ದಾರಿ. ಕ್ರಮ ಕೈಗೊಂಡಿಲ್ಲ ಅಂದ್ರೆ ಯಾಕೆ ತಗೊಂಡಿಲ್ಲ ಅಂತ ಕೇಳ್ತಿದ್ರು. ಎಸ್ಐಟಿ ಮಾಡಿದ್ರೆ ಧರ್ಮಾಧಿಕಾರಿಗಳಿಗೆ ಕಳಂಕ ತರ್ತಾರೆ ಅಂತಾರೆ. ಏನು ಬಿಜೆಪಿ ಯವರಿಗೆ ತಲೆಬುಡ ಅರ್ಥ ಆಗುವಾಗೆ ಮಾಡ್ತಾ ಇರ್ತಾರ!!!
ಧರ್ಮಸ್ಥಳ ಚಲೋ ಮಾಡಿದ್ರು. ಯಾರ ಪರವಾಗಿ ಮಾಡಿದ್ರು? ಮಠದ ಪರವಾಗಿ ಮಾಡಿದ್ರು. ಧರ್ಮಸ್ಥಳ ವೇದಿಕೆ ಇಳಿದ ತಕ್ಷಣ ಸೌಜನ್ಯ ಮನೆಗೆ ಹೋಗಿದ್ರು. ಸೌಜನ್ಯ ಮನೆಯಲ್ಲಿ ಅವರ ಸಂಬಂಧಿಕರು ಯಾರ ಹೆಸರು ಹೇಳಿದ್ರು? ವೇದಿಕೆ ಹತ್ತಿದಾಗ ಒಬ್ಬರ ಪರ, ಇಳಿದಾಗ ಅವರ ವಿರುದ್ಧ ನಾ? ಬಿಜೆಪಿಯವರಿಗೆ ಯಾವ RSS ಬಣದ ಮನವೊಲಿಸಬೇಕೆಂದು ಗೊತ್ತಾಗ್ತ ಇಲ್ಲ. ಅದಕ್ಕೆ ಎರಡು ದೋಣಿ ಮೇಲೆ ಕಾಲಿಟ್ಟಿದ್ದಾರೆ. ಷಡ್ಯಂತ್ರ ಹೇಗೆ ಆಗಿದೆ ಅಂತ ಬಿಜೆಪಿಯವರು ಬಿಚ್ಚಿಡಲಿ.