
ಜಿಎಸ್ ಟಿ ದರ ಇಳಿಕೆಗೆ ಮಂಗಳೂರಿನಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆ
Monday, September 22, 2025
Edit
ಮಂಗಳೂರು, ಸಪ್ಟೆಂಬರ್ 22: GST ದರ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರು ಬಿಜೆಪಿ ಕಚೇರಿ ಮುಂಭಾಗ ಸಂಭ್ರಮಾಚರಣೆ ನಡೆಯಿತು. ಪ್ರಧಾನಮಂತ್ರಿ ಗಳು ಐತಿಹಾಸಿಕ ತೆರಿಗೆ ಇಳಿಕೆ ನಿರ್ಧಾರವನ್ನು ಕೈಗೊಂಡ ಹಿನ್ನೆಲೆಯಲ್ಲಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು, ಮಂಗಳೂರು ಬಿಜೆಪಿ ಕಚೇರಿ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.
ಈ ಸಂಭ್ರಮದಲ್ಲಿ ಸಂಸದ ಬೃಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕಿ ಭಾಗೀರತಿ ಮುರುಳಿಯ, ಶಾಸಕ ಉಮಾನಾಥ್ ಕೋಟ್ಯಾನ್ ಸಹಿತ ಬಿಜೆಪಿ ಮುಖಂಡರು, ಮಾಜಿ ಕಾರ್ಪೊರೇಟರ್ ಗಳು ಭಾಗವಹಿಸಿದರು.