
ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಘೋಷಣೆ ಮಾಡಿದರು, ಈಗ ನಮಗೆ ತೆರಿಗೆ ಬಿದ್ದಿದೆ: ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
Wednesday, September 24, 2025
Edit
ಮಂಗಳೂರು ಸಪ್ಟೆಂಬರ್ 22: ನಮಸ್ತೇ ಟ್ರಂಪ್ ಎಂದು ಹೇಳಿ ಕಾರ್ಯಕ್ರಮ ಮಾಡಿ ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ಈಗ ಶೇ. 50ರಷ್ಟು ತೆರಿಗೆ ನಮ್ಮವರ ಮೇಲೆ ಬಿದ್ದಿದೆ. ಹೊರ ಗುತ್ತಿಗೆ ಮೇಲೂ ತೆರಿಗೆ ಹಾಕಲು ಎಚ್1ಬಿ ವಿಸಾಕ್ಕೂ ತೆರಿಗೆಯನ್ನು ಅನ್ವಯ ಮಾಡಲು ಹೊರಟಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅಮೆರಿಕದಲ್ಲಿ ತೆರಿಗೆ ನೀತಿಯಿಂದ ವಾಪಾಸಾಗುವ ಸ್ಥಳೀಯರಿಗೆ ಅವಕಾಶ ಕಲ್ಪಿಸಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ ಖರ್ಗೆ, ಅಮೆರಿಕ ರಾಷ್ಟ್ರ ನೀತಿ ನಮ್ಮ ಹಿಡಿತದಲ್ಲಿಲ್ಲ. ನಮ್ಮ ಪ್ರಧಾನ ಮಂತ್ರಿ ಈ ನಿಟ್ಟಿನಲ್ಲಿ ಏನು ಮಾಡುತ್ತಿದ್ದಾರೆ. ಅಮೇರಿಕಾ ಅವರ ದೇಶಕ್ಕೆ ಒಳ್ಳೆಯದಾಗುವ ಕ್ರಮ ಅವರು ಕೈಗೊಳ್ಳುತ್ತಿದ್ದಾರೆ. ನಮ್ಮ ಪ್ರಧಾನಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಚೀನಾದಂತಹ ರಾಷ್ಟ್ರಗಳು ಮರಳಿ ಬರುವವರಿಗೆ ಹೇಗೆ ಉದ್ಯೋಗ ಕಲ್ಪಿಸಬೇಕು. ಸಂಶೋಧನೆಯನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಕಾರ್ಯಕ್ರಮ ರೂಪಿಸಿವೆ. ಇಲ್ಲಿ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರೂ ತೆಗೆದುಕೊಳ್ಳುವವರಿಲ್ಲ. ಸ್ಥಳೀಯ ಆರ್ಥಿಕ ನವೋದ್ಯಮಗಳಿಗೆ ಬೇರೆ ರಾಜ್ಯಗಳಿಗಿಂತ ರಾಜ್ಯದ ವಾತಾವರಣ ಉತ್ತಮವಾಗಿದೆ. ಕೇಂದ್ರ ಸರಕಾರವೂ ನೆರವು ಒದಗಿಸಬೇಕು ಎಂದವರು ಹೇಳಿದರು.