
ನನ್ನ ಗುರು ಕಲ್ಲಡ್ಕ ಪ್ರಭಾಕರ ಭಟ್ ಅಂತ ಯಾರು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ನನ್ನ ಗುರು ಭಗವಾಧ್ವಜ – ಸಂಸದ ಕ್ಯಾ. ಬ್ರಿಜೇಶ್ ಚೌಟ
Sunday, August 24, 2025
Edit
ಮಂಗಳೂರು, ಅಗಸ್ಟ್ 24: ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವ ಎಸ್ ಐಟಿ ತನಿಖೆ ಬಗ್ಗೆ ಪಕ್ಷದ ನಿಲುವಿಗೆ ನಾನು ಬದ್ದ. ತನಿಖೆ ನಡೆಯುತ್ತಿರುವ ವೇಳೆ ನಾನು ಈ ಕುರಿತಂತೆ ಯಾವುದೇ ಕಮೆಂಟ್ ಮಾಡುವುದಿಲ್ಲ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಪ್ರಕರಣ ಬಗ್ಗೆ ಉಡುಪಿ ಸಂಸದರು ಸದನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ರು. ಯೂಟ್ಯೂಬರ್ ಗಳಿಗೆ ಬೇರೆ ಬೇರೆ ಕಡೆಗಳಿಂದ ಹಣ ಬಂದಿದೆ. ಕ್ಷೇತ್ರದ ವಿರುದ್ದ ಷಡ್ಯಂತ್ರಕ್ಕೆ ಯೂಟ್ಯೂಬರ್ ಗಳಿಗೆ ಹಣ ಬಂದಿದೆ, ಇದರ ಬಗ್ಗೆ ಸೂಕ್ತ ತನಿಖೆಗೆ ಈಗಾಗಲೇ ಆಗ್ರಹಿಸಲಾಗಿದೆ. ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಪಕ್ಷ ಮತ್ತು ಜನಪ್ರತಿನಿಧಿಗಳ ನಿಲುವು ಈಗಾಲೂ ಸ್ಪಷ್ಟವಾಗಿದ್ದು, ಧರ್ಮಸ್ಥಳ ಹಿಂದೂಗಳ ಧಾರ್ಮಿಕ ಕೇಂದ್ರ ಭಾವನೆಗಳ ಕೇಂದ್ರವಾಗಿದೆ, ಯಾವುದೇ ಕೇಸ್ ನ್ನು ಇಟ್ಟುಕೊಂಡು ಶೃದ್ದಾ ಕೇಂದ್ರಗಳ ಮೇಲೆ ಅಪಮಾನ ಮಾಡುವುದು, ಭಕ್ತರ ಭಾವನೆಗಳಿಗೆ ಘಾಸಿಗೊಳಿಸುವುದನ್ನು ಸಹಿಸುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
