
ನಾನು ರಂಗ ಭೂಮಿಗೆ ಬಂದು 38 ವರ್ಷ ಕಳೆದಿದೆ ಇಂಥ ಅವ್ಯವಸ್ಥೆ ಯಾವತ್ತೂ ಆಗಿಲ್ಲ
Saturday, August 23, 2025
Edit
ಮಂಗಳೂರು ಆಗಸ್ಟ್ 23: ಎಷ್ಟೋ ಸಮಯದಿಂದ ನಡೆದು ಕೊಂಡು ಬಂದಂತ ಸಾಂಸ್ಕೃತಿಕ ಕಾರ್ಯಕ್ರಮ ಇವತ್ತು ಈ ರೀತಿಯಲ್ಲಿ ನನ್ನ ಜೀವನದಲ್ಲಿ ನೋಡಿಲ್ಲ. ನಾನು ರಂಗ ಭೂವಿಗೆ ಪ್ರವೇಶ ಮಾಡಿ 38 ವರ್ಷ ಕಳೆದಿದೆ. ಈ ರೀತಿಯ ಅವ್ಯವಸ್ಥೆ ಯಾವಾಗ ಸಹ ನಡೆದಿಲ್ಲ. ಇತ್ತೀಚೆಗೆ ಒಂದು ಸಾವಿರಕ್ಕೂ ಅಧಿಕ ಜನ ಸೇರಿದ ಒಂದು ಕಾರ್ಯಕ್ರಮದಲ್ಲಿ ಜನರೇಟರ್ ಕೊಂಡು ಹೋಗುತ್ತೇವೆಂದು ಪೋಲಿಸ್ ಇಲಾಖೆ ಸಿಬ್ಬಂದಿಗಳು ಹೇಳಿದರು. ಇಂತಹ ಸಂಧರ್ಭದಲ್ಲಿ ಹೃಧಯಘಾತವು ಸಂಭವಿಸಬಹುದು.
ಡಿ.ಜೆ ಸೌಂಡ್ ಗೆ ಸಂಭಂದಿಸಿದ ಹಾಗೆ ಮಾಲಕರು ದೊಡ್ಡ ಪ್ರಮಾಣದ ಬಂಡವಾಳ ಹಾಕಿರುತ್ತಾರೆ. ಇವರ ಸಾಮಗ್ರಿಗಳನ್ನು ಸೀಜ್ ಮಾಡಿ ಬೆಲೆಬಾಳುವ ಸಾಮಾನುಗಳನ್ನು ಡಂಪ್ ಮಾಡಿದ್ದಲ್ಲಿ ಮಾಲಿಕರಿಗೆ ಖಂಡಿತವಾಗಿ ಹೊಟ್ಟೆ ಉರಿಯುತ್ತದೆ. ಅವರ ಜೀವನ, ಕಲಾವಿದರ ಜೀವನ ಎಲ್ಲವೂ ಇದರಿಂದಲೇ ಜೀವನ ಸಾಗುತ್ತದೆ. ಇಂತಹ ಸಂಧರ್ಭ ನಾವುಗಳು ಅಸಹಾಯಕರಾಗುತ್ತೇವೆ. ಕಲಾಭಿಮಾನಿಗಳಿಗೂ ಬೇಸರ. ಇದರಿಂದ ಹೊಡೆತ ಬೀಳುತ್ತದೆ. ಇದಕ್ಕೆ ಜನಪ್ರತಿನಿಧಿಗಳು ನಮ್ಮ ಪರವಾಗಿ ಧ್ವನಿ ಎತ್ತಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಜಿಲ್ಲಾಡಳಿತ, ಸರಕಾರಕ್ಕೆ ಮನವರಿಕೆ ಮಾಡಿದರೆ ಇದು ಸಾಧ್ಯ ಎಂದು ಹಿರಿಯ ತುಳು ರಂಗ ಭೂಮಿಯ ದಿಗ್ಗಜರಾದ ಡಾ.ದೇವದಾಸ್ ಕಾಪಿಕಾಡ್ ತಿಳಿಸಿದರು