
ಮುಂದೊಂದು ದಿನ ಪೋಲಿಸರು ಭೂತಕೋಲಕ್ಕೆ ಹೋಗಿ ಸಮಯ 10 ಘಂಟೆ ಆಯಿತು ಗಗ್ಗರ ತೆಗೆಯಿರಿ ಅನ್ನುವ ಕಾಲಬರಬಹುದು
Saturday, August 23, 2025
Edit
ಮಂಗಳೂರು ಆಗಸ್ಟ್ 23: ಇತ್ತೀಚೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಸೌಂಡ್ ಕೊಡಲಿಕ್ಕೆ ಆಗುವುದಿಲ್ಲ ಎಂದು ಕಾರ್ಯಕ್ರಮ ನಿಲ್ಲಿಸಲಾಗಿದೆ. ಬೆಂಗಳೂರು ಹಾಗೂ ಇತರ ನಗರದಲ್ಲಿ ಕೆಲವೊಂದು ಕಾನೂನು ಇದೆ. ಅ ಕಾನೂನನ್ನು ಇಲ್ಲಿನ ಸಂಪ್ರದಾಯ ಉಳಿಸಲಿಕ್ಕೆ ಜಿಲ್ಲಾಡಳಿತ ಸ್ವಲ್ಪ ಸಡಿಲುಗೊಳಿಸಬೇಕು ಎಂದು ಜಿಲ್ಲಾಡಳಿತದಲ್ಲಿ ವಿನಂತಿ ಮಾಡುತ್ತೇವೆ. ಹತ್ತು ಘಂಟೆಗೆ ಕಾರ್ಯಕ್ರಮ ಮುಗಿಸಲು ಸಾಧ್ಯವಿಲ್ಲ. ಕಾರ್ಯಕ್ರಮ ಶುರು ಆಗುವುದೇ ರಾತ್ರಿ ಎಂಟು ಘಂಟೆ ಬಳಿಕ, ಅದರಲ್ಲಿ ಎರಡು ಘಂಟೆ ಸಭಾ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮ ಇರುತ್ತದೆ.
ಮುಂದೊಂದು ದಿನ ಪೋಲಿಸರು ಭೂತಕೋಲಕ್ಕೆ ಹೋಗಿ ಗಗ್ಗರ ಕಟ್ಟಿ ಆಗುವಾಗ ಸಮಯ 10 ಘಂಟೆ ಆಯಿತು, ಗಗ್ಗರ ತೆಗೆಯಿರಿ ಅನ್ನುವ ಕಾಲವೂ ಬರಬಹುದು. ಇಲ್ಲಿನ ಸಂಪ್ರದಾಯ ಹಾಗು ಇಲ್ಲಿನ ಆಚರಣೆ ಉಳಿಸಲು ಜಿಲ್ಲಾಡಳಿತ ಕಾನೂನನ್ನು ಸಡಿಲಿಕೆ ಮಾಡಬೇಕು. ಇಲ್ಲಿನ ಸಾಂಸ್ಕ್ರತಿಕ ಕಾರ್ಯಕ್ರಮ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು ನಮ್ಮ ಪರವಾಗಿ ಮುಖ್ಯಮಂತ್ರಿ, ಗೃಹಸಚಿವರಲ್ಲಿ ಮಾತನಾಡಿ ಬೇರೆ ಜಿಲ್ಲೆಯಲ್ಲಿ ಇಲ್ಲದ ಕಾನೂನು ನಮಗೆ ಯಾಕೆ ಎಂದು ಪ್ರಶ್ನೆ ಮಾಡಬೇಕು. ಮೊದಲಿನ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯುವ ಹಾಗೆ ಅವಕಾಶ ಮಾಡಿಕೊಡಬೇಕು ಎಂದು ತುಳುನಾಡ ಕಲಾವಿದರ ಒಕ್ಕೂಟ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ರಂಗ ಭೂಮಿ ಮತ್ತು ತುಳು ಸಿನಿಮಾ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು.