ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು
ಬಂಟ್ವಾಳ: ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು, ಕೃಷಿತೋಟಗಳಲ್ಲಿ ಸುತ್ತಾಡಿ ಇದೀಗ ಜಲಕ್ರೀಡೆಯಲ್ಲಿ ತೊಡಗಿದೆ. ಆನೆಗಳ ಆಗಮನದಿಂದ ಭಯಬೀತರಾದ ಗ್ರಾಮಸ್ಥರು ಆರಣ್ಯ ಇಲಾಖೆಯ ಮೊರೆಹೋಗಿದ್ದಾರೆ. ಬಂಟ್ವಾಳ ತಾಲೂಕಿನ ಸರಳಿಕಟ್ಟೆ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಎರಡು ಆನೆಗಳು ಜಲಕ್ರೀಡೆ ಮಾಡುತ್ತಿವೆ.
ರಾತ್ರಿ ವೇಳೆಯಲ್ಲಿ ಪೆರ್ನೆಯ ಅನೇಕ ಕೃಷಿಕರ ತೋಟದಲ್ಲಿ ಸುತ್ತಾಡಿದ್ದು, ಇಂದು ಬೆಳಿಗ್ಗೆಯಿಂದ ಸರಳಿಕಟ್ಟೆ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದೆ.
ಆನೆಗಳು ನಾಡಿಗೆ ಬಂದಿರುವುದರ ಬಗ್ಗೆ ಭಯಬೀತರಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಂಟ್ವಾಳದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿದ್ದು, ವಲಯ ಅರಣ್ಯ ಅಧಿಕಾರಿ ಸುನಿಲ್ ಅವರು ಬೇಟಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ರಾತ್ರಿಯೇ ಅರಣ್ಯ ಇಲಾಖೆಗೆ ತಿಳಿಸಲಾಗಿದೆಯಾದರೂ ಬಂಟ್ವಾಳ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಸ್ಪಂದನೆ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಆನೆಗಳು ಜಲಕ್ರೀಡೆಯಲ್ಲಿರುವ ಕಾರಣಕ್ಕೆ ಗ್ರಾಮಸ್ಥರು ಯಾರೂ ಕೂಡ ನದಿ ತೀರದತ್ತ ಬರದಂತೆ ಎಚ್ಚರಿಕೆ ನೀಡಿದೆ.
ಆನೆಗಳನ್ನು ಮತ್ತೆ ಕಾಡಿಗೆ ಓಡಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ವನ್ಯ ಜೀವಿಗಳು ಕಾಡಿನಿಂದ ನಾಡಿಗೆ ಬಂದಾಗ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಸೂಕ್ತವಾದ ಮಾರ್ಗದರ್ಶನ ನೀಡಿ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅವರ ಜವಾಬ್ದಾರಿ ಆಗಿದ್ದರು ಕೂಡ ಇಲ್ಲಿ ಯಾವ ಉನ್ನತ ಅಧಿಕಾರಿಗಳು ಬಂದಿಲ್ಲ ಎಂಬ ಆರೋಪ ಇಲ್ಲಿನ ಗ್ರಾಮಸ್ಥರು ಮಾಡಿದ್ದಾರೆ.