ಆಸ್ತಿಗಾಗಿ ಅನನ್ಯ ಭಟ್ ನಾಪತ್ತೆ ಕಥೆ ಕಟ್ಟಿದ ಸುಜಾತಾ ಭಟ್ – ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ. ಹೇಳಿದ ಹಾಗೇ ನಾನು ಹೇಳಿದೆ

ಆಸ್ತಿಗಾಗಿ ಅನನ್ಯ ಭಟ್ ನಾಪತ್ತೆ ಕಥೆ ಕಟ್ಟಿದ ಸುಜಾತಾ ಭಟ್ – ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ. ಹೇಳಿದ ಹಾಗೇ ನಾನು ಹೇಳಿದೆ


ಬೆಳ್ತಂಗಡಿ, ಆಗಸ್ಟ್ 22:  ಧರ್ಮಸ್ಥಳ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆಸ್ತಿಗಾಗಿ ಅನನ್ಯ ಭಟ್ ಕಥೆ ಕಟ್ಟಿದ ಸುಜಾತಾ ಭಟ್ ಇದೀಗ ಎಲ್ಲವೂ ಸುಳ್ಳು ಎಂದು ಹೇಳಿದ್ದಾರೆ. ಇದರೊಂದಿಗೆ  ಧರ್ಮಸ್ಥಳ ಪ್ರಕರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ ಸುಜಾತ್ ಭಟ್ ಮಗಳು ಅನನ್ಯಾ ಭಟ್ ನಾಪತ್ತೆ ಕೇಸ್ ಅಸಲಿ ವಿಚಾರ ಹೊರಬಂದಿದೆ.

ಇನ್‌ಸೈಟ್‌ರಶ್‌ ಯೂಟ್ಯೂಬ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಸುಜಾತಾ ಭಟ್ ನಿಮ್ಮ ಮಗಳು ಅನ್ನೋ ಕತೆ ಸತ್ಯವೇ ಅಥವಾ ಸುಳ್ಳೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, ಅನನ್ಯಾ ಭಟ್ ಅನ್ನೋ ಮಗಳು ಸುಳ್ಳು ಕತೆ, ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ ಹೇಳಿದ ಹಾಗೇ ನಾನು ಹೇಳಿದೆ. ಆಸ್ತಿ ವಿಚಾರವಾಗಿ ಈ ಕತೆ ಹೇಳಿಕೊಟ್ಟಿದ್ದರು. ಹೀಗಾಗಿ ಈ ಕತೆ ಹೇಳಿದೆ. ನನಗೆ ದುಡ್ಡಿಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೂ ಯಾರೂ ಆಫರ್ ಮಾಡಿಲ್ಲ. ಆದರೆ ನನ್ನ ತಾತನ ಆಸ್ತಿಯನ್ನು ಧರ್ಮಸ್ಥಳಕ್ಕೆ ದಾನವಾಗಿ ಹೇಗೆ ಕೊಟ್ಟರು ಅನ್ನೋದು ನನ್ನ ಪ್ರಶ್ನೆ. ಅದು ನನಗೂ ಸಿಗಬೇಕಿತ್ತು. ಆದರೆ ನನಗೆ ಪಾಲು ಸಿಗಲಿಲ್ಲ ಎಂದು ಸುಜಾತ್ ಭಟ್ ನೋವು ತೋಡಿಕೊಂಡಿದ್ದಾಳೆ.
ಮಗಳು ಫೋಟೋ ಬಿಡುಗಡೆ ಮಾಡಿದ್ದು ಸುಳ್ಳು, ಅದು ಖಂಡಿತ ಸುಳ್ಳು ಫೋಟೋ ಎಂದು ಸುಜಾತಾ ಭಟ್ ಹೇಳಿದ್ದಾರೆ. ಇದೇ ವೇಳೆ ತಾನು ಧರ್ಮಸ್ಥಳದ ಜನರ ನಂಬಿಕೆ, ಜನರ ಭಾವನೆ ಜೊತೆ ಆಟವಾಡಿಲ್ಲ. ಆದರೆ ನನ್ನನ್ನು ಜನರ ಭಾವನೆ ಜೊತೆ ಆಟವಾಡುವಂತೆ ಕೆಲವರು ಮಾಡಿದರು ಎಂದು ಸುಜಾತಾ ಭಟ್ ಹೇಳಿದ್ದಾರೆ. ಆಸ್ತಿಯಲ್ಲಿ ನನಗೆ ಪಾಲು ನೀಡದೆ ಕೊಟ್ಟಿದ್ದಾರೆ. ಈ ನೋವು ನನಗಿದೆ ಎಂದು ಹೇಳಿದ್ದಾರೆ.

ನಮ್ಮ ಕುಟುಂಬದ ದೇವರನ್ನು ಜೈನರಿಗೆ ಕೊಟ್ಟಿರುವ ನೋವಿದೆ. ಒಂದು ಟ್ರಸ್ಟ್‌ಗೆ ಕೊಡಬಹುದಿತ್ತು. ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ, ಧಿಕ್ಕರಿಸಿದ್ದಾರೆ, ಮಗಳೇ ಇಲ್ಲ ಎಂದು ಇವರೇ ಸಹಿ ಹಾಕಿದಾಗ ನನಗೆ ಎಷ್ಟು ನೋವಾಗಿರಬೇಕು. ನನ್ನ ಸಹಿ ಇಲ್ಲದೆ ಕುಟುಂಬಸ್ಥರು ನೇರವಾಗಿ ಧರ್ಮಸ್ಥಳಕ್ಕೆ ಆಸ್ತಿ ನೀಡಿದ್ದಾರೆ. ಇದು ಎಷ್ಟು ಸರಿ. ನಾನು ಧರ್ಮಸ್ಥಳ ದೇವಸ್ಥಾನಕ್ಕೆ ಧಕ್ಕೆ ತಂದಿಲ್ಲ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಗೆ ಧಕ್ಕೆ ತಂದಿಲ್ಲ. ಧರ್ಮಸ್ಥಳ ಗ್ರಾಮದಲ್ಲಿ ಎಂದು ಹೇಳಿದ್ದೇನೆ ಎಂದು ಸುಜಾತ್ ಭಟ್ ತಮ್ಮ ಸುಳ್ಳಿನ ಅಸಲಿ ಕತೆಯನ್ನು ಬಹಿರಂಗಪಡಿಸಿದ್ದಾರೆ.

ಆಸ್ತಿಗಾಗಿ ಅನನ್ಯಾ ಭಟ್ ಕತೆ ಕಟ್ಟಿದ್ದೇನೆ. ನಮ್ಮ ಕುಟುಂಬಸ್ಥರು ನನಗೆ ಮಾಹಿತಿ ನೀಡದೆ ಆಸ್ತಿ ದಾನ ಮಾಡಿದ್ದಾರೆ. ಆಸ್ತಿ ಪಡೆಯುವಾಗ ಧರ್ಮಸ್ಥಳದವರು ಕುಟುಂಬದ ವೃಕ್ಷ ಕೊಡಿ ಎಂದು ಅವರು ಕೇಳಬಹುದಿತ್ತು. ಮೂರು ಹೆಣ್ಣುಮಕ್ಕಳು ಎಂದರೆ ನಾನು ಯಾರು? ನನ್ನನ್ನು ಕೇಳದೇ ಹೇಗೆ ಆಸ್ತಿ ಕೊಟ್ಟರು. ಧರ್ಮಸ್ಧಳದವರು ಕೊನೆ ಪಕ್ಷ ಇಡೀ ಕುಟುಂಬಸ್ಥರ ಸಹಿ ಪಡೆಯಬೇಕಿತ್ತು.ಆದರೆ ಯಾವುದು ಮಾಡಿಲ್ಲ ಎಂದು ಸುಜಾತ್ ಭಟ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article