
ಮಂಗಳೂರಿನ ಕಂಕನಾಡಿಯಲ್ಲಿ 2 ಕೋಟಿಗೂ ಅಧಿಕ ಪ್ರಮಾಣದ ಅಂಬರ್ ಗ್ರೀಸ್ ( ತಿಮಿಂಗಿಲ ವಾಂತಿ) ಪತ್ತೆ
Tuesday, February 15, 2022
Edit
ಮಂಗಳೂರು ನಗರದಲ್ಲಿ 2 ಕೋಟಿ 20 ಲಕ್ಷ ಮೌಲ್ಯದ ಅಂಬರ್ ಗ್ರೀಸ್ ( ತಿಮಿಂಗಿಲ ವಾಂತಿ) ನ್ನು ಮಾರುತ್ತಿದ್ದ 4 ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಂಕನಾಡಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯ ಜೆಪ್ಪಿನ ಮೊಗರು ನ ಖಾಲಿ ಸ್ಥಳದಲ್ಲಿ ಅಂಬರ್ ಗ್ರೀಸ್ ಮಾರಾಟ ಮಾಡಲಾಗುತ್ತಿತ್ತು.
ಮಾರಾಟ ಮಾಡುತ್ತಿದ್ದ ಆರೋಪಿಗಳಾದ
ಕೊಡಗು ಜಿಲ್ಲೆಯ (1) ಜಾಬೀರ್ ಎಮ್.ಎ. (35), ಕಾಂಞ್ಞಾಂಗಾಡ್ ನಿವಾಸಿಗಳಾದ (2)ಆಸೀರ್ ವಿ.ಪಿ. (36), (3)ಶರೀಫ್ ಎನ್.(32), ಹಾಗೂ (4) ಶಬಾದ್ ಎಲ್.ಕೆ.(27) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇವರುಗಳು ಸುಮಾರು 2 ಕೋಟಿ 20 ಲಕ್ಷ ಮೌಲ್ಯದ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಆರೋಪಿಗಳಿಂದ 5 ಮೊಬೈಲ್, 1 ಸ್ವಿಫ್ಟ್ ಕಾರು, ನಗದು ರೂ.1070/- ವಶಪಡಿಸಿಕೊಳ್ಳಲಾಗಿದೆ. ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.