
ದೇಶದಲ್ಲಿ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವುದು ಬಿಜೆಪಿ ನಾಯಕರ ಡ್ಯೂಟಿ: ಡಿಕೆಶಿ
Sunday, February 6, 2022
Edit
ಮಂಗಳೂರು: ಬಿಜೆಪಿ ನಾಯಕರ ಕೆಲಸವೇ ಮಕ್ಕಳಲ್ಲಿ ಅಶಾಂತಿ ಮೂಡಿಸುವುದು. ಈ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂದು ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ವಿವಾದದ ಬಗ್ಗೆ ಮಂಗಳೂರಿನಲ್ಲಿಂದು ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವುದು ಅವರ ಡ್ಯೂಟಿ. ನಮ್ಮ ಪಾರ್ಟಿಯ ವಿರುದ್ಧ ಮಾತನಾಡುವುದೇ ಅವರ ಕೆಲಸ ಎಂದು ಮಂಗಳೂರು ಏರ್ಪೋಟ್ ನಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.