ಮಂಗಳೂರಿನ ರೈಲಿನಲ್ಲಿ ದಾಖಲಾತಿ ಇಲ್ಲದ 1.48 ಕೋಟಿ ನಗದು, ₹40 ಲಕ್ಷದ ಚಿನ್ನಾಭರಣ ವಶ

ಮಂಗಳೂರಿನ ರೈಲಿನಲ್ಲಿ ದಾಖಲಾತಿ ಇಲ್ಲದ 1.48 ಕೋಟಿ ನಗದು, ₹40 ಲಕ್ಷದ ಚಿನ್ನಾಭರಣ ವಶ


 ಮಂಗಳೂರು: ರೈಲು ತಪಾಸಣೆ ಸಂದರ್ಭ ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಬಂದ ರೈಲನ್ನು ತಪಾಸಣೆ ನಡೆಸಿದಾಗ ಎಸ್ 4 ಸೀಟ್ ನಂಬರ್ ನಲ್ಲಿ  ಪ್ರಯಾಣಿಕನೊರ್ವನ ಕಪ್ಪು ಬಿಳಿ ಬಣ್ಣದ ಬ್ಯಾಗ್ ಸಂಶಯದ ಮೇಲೆ ತಪಾಸಣೆ  ನಡೆಸಿದಾಗ ಅದರಲ್ಲಿ ಆಧಾರ ರಹಿತ ನಗದು 1.48 ಕೋಟಿ ರೂ. ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ಗಣರಾಜ್ಯೋತ್ಸವದ ಹಿನ್ನೆಲೆ, ಅನುಮಾನಸ್ಪದ ವ್ಯಕ್ತಿ ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎ.ಡಿ.ಜಿ.ಪಿ ರೈಲ್ವೇಸ್ ಬೆಂಗಳೂರು ಶ್ರಿ ಬಾಸ್ಕರ್ ರಾವ್ ಐ.ಪಿ.ಎಸ್. ಅವರ ನಿರ್ದೇಶನದಂತೆ ಮಂಗಳೂರು ರೈಲ್ವೇ ಪೋಲಿಸ್ ಠಾಣೆಯ ಪೋಲಿಸ್ ನೀರಿಕ್ಷಕರಾದ ಮೋಹನ್ ಕೊಟ್ಟಾರಿ  ಮತ್ತು ಠಾಣಾ ಸಿಬ್ಬಂದಿಗಳು ಜೊತೆ ಮಂಗಳೂರಿನ ಪ್ರಮುಖ ಎರಡು ಸ್ಟೇಷನ್ ಗಳಲ್ಲಿ ತಪಾಸಣೆ ನಡೆಸುತ್ತಿದ್ದರು ತಾ 23/01/2022 ರಂದು ಬೆಳಿಗ್ಗೆ ಪನ್ವೇಲ್ ನಿಂದ ಮಂಗಳೂರಿಗೆ ಬರುತ್ತಿದ ರೈಲನ್ನು ತಪಾಸುಣ ನಡೆಸುತ್ತಿದ್ದೆ ಸಂದರ್ಭ ರೈಲಿನಲ್ಲಿ ಪ್ರಯಾಣಿಕನೋರ್ವ ದಾಖಲಾತಿ ಇಲ್ಲದೆ ಅಪಾರ ಪ್ರಮಾಣದ ನಗದು ಮತ್ತು ಚಿನ್ನವನ್ನು ಸಾಗಿಸುತ್ತಿರುವುದನ್ನು  ಮಂಗಳೂರು ರೈಲ್ವೆ ಪೊಲೀಸರು ಪತ್ತೆ ಹಚ್ಚಿ ಪ್ರಯಾಣಿಕನನ್ನು ಬಂಧಿಸಿದ್ದಾರೆ.

 ದಿನಾಂಕ 23/01/2022 ರಂದು ಬೆಳಿಗ್ಗೆ ಸರಿ ಸುಮಾರು 10-30 ಗಂಟೆಯ ಸಮಯದಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ರೈಲುಗಾಡಿ ಸಂಖ್ಯೆ 12223 ದುರಂತ್  ಎಕ್ಸ್‌ಪ್ರೆಸ್ ರೈಲುಗಾಡಿಯ ಎಸ್-4 ಸೀಟ್ ನಂ 35 ರಲ್ಲಿ ಪ್ರಯಾಣ ಮಾಡುತ್ತಿದ್ದು, ಈತನು ಪನ್ವೇಲ್ ರೈಲು ನಿಲ್ದಾಣದಿಂದ ಪ್ರಯಾಣ ಮಾಡಿದ್ದು, ಆತನು ಬಳಿ ಒಂದು ಕಪ್ಪು ಬಣ್ಣದ ಬ್ಯಾಕ್ ಬ್ಯಾಗ್ ಇದ್ದು ತಪಾಸಣೆ ವೇಳೆ ಪರಿಶೀಲಿಸಿದಾಗ ಆತನ ಬ್ಲಾಗಿನಲ್ಲಿ  ನಗದು ಹಣ ರೂ 1,48,58,000/- ಮತ್ತು 800 ಗ್ರಾಂ ತೂಕದ ಚಿನ್ನಾಬರಣ ಬೆಲೆ ಸುಮಾರು 40,00,000/ ಒಟ್ಟು, ಬೆಲೆ ಸುಮಾರು 1,88,58,000/- ಗಳು ಇದ್ದು, ಇವುಗಳ ಬಗ್ಗೆ, ಯಾವುದೇ ದಾಖಲಾತಿಗಳು ಇಲ್ಲದೇ ಇದ್ದು ಮೇಲಾಧೀಕಾರಿ ಸೂಚನೆಯಂತೆ ನಗದು ಮತ್ತು ಚಿನ್ನಾಭರಣವನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಲಾಗಿದೆ.

Ads on article

Advertise in articles 1

advertising articles 2

Advertise under the article