ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ವಿಜಯ ತಂದು ಕೊಟ್ಟ ಹೆಮ್ಮೆಯ ಟಿಟಿ-55 ಯುದ್ಧ ಟ್ಯಾಂಕ್ ಮಂಗಳೂರಿನಲ್ಲಿ...!!

ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ವಿಜಯ ತಂದು ಕೊಟ್ಟ ಹೆಮ್ಮೆಯ ಟಿಟಿ-55 ಯುದ್ಧ ಟ್ಯಾಂಕ್ ಮಂಗಳೂರಿನಲ್ಲಿ...!!

ಬಾಂಗ್ಲಾ ವಿಮೋಚನೆಯ ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಭಾರತ ದೇಶಕ್ಕೆ ವಿಜಯ ತಂದು ಕೊಟ್ಟ ಹೆಮ್ಮೆಯ ಟಿಟಿ-55 ಯುದ್ಧ ಟ್ಯಾಂಕ್ ಇದೀಗ ಮಂಗಳೂರು ನಗರದ ಕದ್ರಿ ಬಳಿ ಸಾರ್ವಜನಿಕ ಪ್ರದರ್ಶನಕ್ಕೆ ಸಜ್ಜಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮುತುವರ್ಜಿಯಿಂದ ಇದು ಸಾದ್ಯವಾಗಿದೆ.
ವರ್ಷದ ಹಿಂದೆ  ಪೂನಾದಿಂದ  ಈ ಟಿ-55 ಹಳೇ ಯುದ್ಧ ಟ್ಯಾಂಕ್‌ ಅನ್ನು  ಮಂಗಳೂರಿಗೆ ತರಿಸಲಾಗಿತ್ತು.ಇದೀಗ ಕದ್ರಿಯ ಹುತಾತ್ಮರ ಸ್ಮಾರಕದ ಬಳಿಗೆ ಸ್ಥಳಾಂತರಿಸಲಾಗಿದೆ.
ಭಾರತೀಯ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದ ಹಳೇ ಟ್ಯಾಂಕ್‌ ಇದಾಗಿದ್ದು ಭಾರತ ಪಾಕ್ ಯುದ್ದ,  ಬಾಂಗ್ಲಾ ದೇಶದ ವಿಮೋಚನ ಯುದ್ಧದಲ್ಲಿ ಇದು ಮಹತ್ತ್ವದ ಪಾತ್ರ ವಹಿಸಿತ್ತು ಯುದ್ಧದಿಂದ ನಿವೃತ್ತಿ ಬಳಿಕ ಪೂನಾದ ಕಿರ್ಕೀ ಡಿಫೆನ್ಸ್ ಡಿಪೊದಲ್ಲಿ ಇರಿಸಲಾಗಿತ್ತು.
ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರ ಮನವಿಯಂತೆ ಮಂಗಳೂರಿನಲ್ಲಿ ಈ ಟ್ಯಾಂಕ್‌ ಅನ್ನು ಸ್ಪೂರ್ತಿದಾಯಕ ಪ್ರದರ್ಶನಕ್ಕೆ ಇರಿಸುವುದಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅನುಮತಿ ಕೊಟ್ಟಿದ್ದರು. ಇದನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳೂರಿಗೆ ಕಳೆದ ವರ್ಷ ತರಿಸಿ ಮನಪಾ ವತಿಯಿಂದಲೇ ಇದನ್ನು ನಿರ್ವಹಿಸಲಾಗುತ್ತಿದ್ದು, ಕದ್ರಿ ವಾರ್‌ ಮೆಮೊರಿಯಲ್‌ ಬಳಿ ಇದಕ್ಕೆ ವೇದಿಕೆ ನಿರ್ಮಿಸಿ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ.
ಬುಧವಾರ ಸಂಜೆ ಕ್ರೇನ್‌ ಬಳಸಿ ಟ್ಯಾಂಕ್‌ ಅನ್ನು ವ್ಯವಸ್ಥಿತವಾಗಿ 38ಲಕ್ಷ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ವೇದಿಕೆಯ ಮೇಲೆ ಇರಿಸಲಾಯಿತು. 
ಸಂಪೂರ್ಣ ಕಾರ್ಯದ ಬಳಿಕ ಟ್ಯಾಂಕ್ ವೀಕ್ಷಣೆ ಸಾರ್ವಜನಿಕರಿಗೆ ಲಭ್ಯ ವಾಗಲಿದೆ.

Ads on article

Advertise in articles 1

advertising articles 2

Advertise under the article