ನಕ್ಸಲ್ ಕರಪತ್ರ ಹಂಚಿದ ಪ್ರಕರಣ: ನಕ್ಸಲ್ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

ನಕ್ಸಲ್ ಕರಪತ್ರ ಹಂಚಿದ ಪ್ರಕರಣ: ನಕ್ಸಲ್ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು


ಕುತ್ಲೂರು ಬಳಿ 2012 ರಲ್ಲಿ ನಕ್ಸಲ್ ಕರಪತ್ರ ಹಚ್ಚಿದ ಪ್ರಕರಣಕ್ಕೆ ಸಂಬಂದಿಸಿದ್ದತೆ ನಕ್ಸಲ್ ಮಹೇಶ್ ಯಾನೆ ಜಯಣ್ಣ ಅಲಿಯಾಸ್ ಜಾನ್ (49) ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಲಾಯಿತು.

ಕೇರಳ ರಾಜ್ಯದ ತ್ರಿಶೂರ್ ಜೈಲಿನಲ್ಲಿದ್ದ ಮಹೇಶ್ ನನ್ನು ಕೇರಳ ರಾಜ್ಯದ ಪೊಲೀಸರು ಬಿಗಿ ಭದ್ರತೆಯೊಂದಿಗೆ ಗುರುವಾರ ಬೆಳ್ತಂಗಡಿಗೆ ಕರೆತಂದರು.

ಆರೋಪಿ ಮಹೇಶ್ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮ ಕುಡುಡಿ ಮುಖ್ಯ ರಸ್ತೆಯ ಹನುವ್ವನ ದೂತರ ಮಠದ ಎದುರಿನ ಅಂಬೇಡ್ಕ‌ರ್ ಕಾಲೊನಿಯ ನಿವಾಸಿ. ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ ಆರೋಪ ಎದುರಿಸುತ್ತಿರುವ ಆತನಿಗೆ ಜಯಣ್ಣ, ಜಾನ್, ಮಾರಪ್ಪ ಎಂಬ ಹೆಸರುಗಳೂ ಇವೆ.

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ಕುತ್ಲೂರು ಲಿಂಗಪ್ಪ ಮಲೆಕುಡಿಯ ಮನೆಯ ಅಂಗಳದಲ್ಲಿ ನಕ್ಸಲ್ ಕರಪತ್ರ ಹಚ್ಚಿದ್ದ ಪ್ರಕರಣದ ಮರು ತನಿಖೆಗೆ ನ್ಯಾಯಾಲಯ ಆದೇಶ ಹೊರಡಿಸಿದ ಕಾರಣ ಆತನನ್ನು ಬೆಳ್ತಂಗಡಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆ. ಆತ ಆರು ತಿಂಗಳಿಂದ ಕೇರಳದ ಜೈಲಿನಲ್ಲಿದ್ದ. ಕರ್ನಾಟಕದ ನಕ್ಸಲ್ ಮುಖಂಡರುಗಳೊಂದಿಗೆ ಮಹೇಶ್ ಶರಣಾತಿಯಾಗಿದ್ದ.

Ads on article

Advertise in articles 1

advertising articles 2

Advertise under the article