ಕಾಂಗ್ರೆಸ್ ನಾಯಕರುಗಳಿಗೆ ಮುಸ್ಲಿಮರ ಟೋಪಿ ಬಗ್ಗೆ ಮಾತನಾಡುವ ಧೈರ್ಯ ಇದೆಯಾ – ವೇದವ್ಯಾಸ್ ಕಾಮತ್
Monday, October 13, 2025
Edit
ಮಂಗಳೂರು ಅಕ್ಟೋಬರ್ 13: ಆರ್ ಎಸ್ಎಸ್ ಟೋಪಿ ಯನ್ನ ಕರಿ ಟೋಪಿ ಎಂದು ಕರೆಯುವ ಮಾನಸಿಕತನ ಇರುವ ಈ ಕಾಂಗ್ರೆಸ್ ನಾಯಕರುಗಳಿಗೆ ಎಲ್ಲಿಯಾದರೂ ಮುಸ್ಲಿಮರ ಟೋಪಿ ಬಗ್ಗೆ ಮಾತನಾಡುವ ಧೈರ್ಯ ಅಧಿಕಾರ ಇದೆಯಾ ತಾಕತ್ತಿದ್ರೆ ಅದನ್ನ ಕೇಳಿ ಎಂದು ಶಾಸಕ ವೇದವ್ಯಾಸ್ ಕಾಮತ್ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ ಅವರ ಯೋಗ್ಯತೆಯಿಂದ ಸಚಿವ ಆಗಿಲ್ಲ ಅವರ ಅಪ್ಪನ ಖರ್ಗೆ ಎಂಬ ಸರ್ ನೇಮಿನಿಂದ ಮಂತ್ರಿ ಸ್ಥಾನ ಲಭಿಸಿದೆ. ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ವಿರುದ್ದ ಕೀಳು ಮಟ್ಟದ ಮಾತನ್ನು ಖಂಡಿಸುತ್ತೆನೆ, ಅಲ್ಲದೆ ಆರ್ ಎಸ್ಎಸ್ ನ ಬಗ್ಗೆ ತಿಳಿದುಕೊಳ್ಳುವ ಮಾನಸಿಕತೆಯನ್ನ ಬೆಳೆಸಿಕೊಳ್ಳಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಆರ್ ಎಸ್ಎಸ್ ಮಾಡಿರುವ ಕೊಡುಗೆ ಇಲ್ಲಿಯವರೆಗೆ ಯಾವುದೇ ಕಾಂಗ್ರೇಸ್ ಪರಿವಾರ ಮಾಡಿಲ್ಲ , ಕೇವಲ ಮುಸ್ಲಿಮರನ್ನ, ಕೇಂದ್ರದ ನಾಯಕರನ್ನ ತೃಪ್ತಿ ಪಡಿಸಲಿಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ಇನ್ನೂ ಹತ್ತು ತಲೆಮಾರು ಬಂದರೂ ಆರ್ ಎಸ್ಎಸ್ ನ್ನು ನಿರ್ಬಂಧ ಹಾಕ್ಲಿಕೆ ಸಾಧ್ಯವಿಲ್ಲ. ನಾನು ಕೂಡ ಗಣವೇಶ ಹಾಕಿ ಪಥ ಸಂಚಲನ ಮಾಡಿದ್ದೇನೆ ಮುಂದೆಯೂ ಮಾಡುತೇನೆ ತಾಕತ್ತಿದ್ರೆ ತಡೆಯಿರಿ ಎಂದು ಸವಾಲು ಹಾಕಿದರು.