ಪದವಿ ಕಾಲೇಜುಗಳ ಗಣಿತಶಾಸ್ತ್ರ ಅಧ್ಯಾಪಕರುಗಳ ಸಂಘದ ಸಭೆ ಸಂಪನ್ನ
Sunday, September 28, 2025
Edit
ಮಂಗಳೂರು, ಸಪ್ಟೆಂಬರ್ 28: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಗಣಿತಶಾಸ್ತ್ರ ಅಧ್ಯಾಪಕರುಗಳ ಸಂಘದ (ಫಾರ್ಮಾಟ್) ಸಭೆ ಇತ್ತೀಚೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಹಂಪನಕಟ್ಟೆ ಇಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ಸವಿತಾ, ಸರ್ಕಾರಿ ಮಹಿಳಾ ಪದವೀ ಕಾಲೇಜು, ಬಲ್ಮಠ, ಕಾರ್ಯದರ್ಶಿಯಾಗಿ ಡಾ.ಶ್ರೀಮತಿ ಅಡಿಗ, ಅಜ್ಜರ ಕಾಡು ಪದವಿ ಕಾಲೇಜು ಉಡುಪಿ, ಹಾಗೂ ಖಜಾoಚಿಯಾಗಿ ಶ್ರೀಮತಿ ಕೀರ್ತಿ, ಕೆನರಾ ಕಾಲೇಜು ಮಂಗಳೂರು ಇವರು ಆಯ್ಕೆಯಾದರು. ಸಂಘದ ವತಿಯಿಂದ ನಿವೃತ್ತ ಗಣಿತ ಉಪನ್ಯಾಸಕುಗಳಾದ ಶ್ರೀಮತಿ ಸರಸ್ವತಿ ಟಿ ಹಾಗೂ ಶ್ರೀ ಜೆಫ್ರಿ ರೋಡ್ರಿಗಸ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.