ದ್ವಿಚಕ್ರ ಸವಾರನಿಗೆ ಜೀವದಾನ ಮಾಡಿದ ಸಿಟಿ ಬಸ್ ಚಾಲಕನಿಗೆ ಅಭಿನಂದನೆಗಳ ಮಹಾಪೂರ
Monday, September 1, 2025
Edit
ಮಂಗಳೂರು : ಶನಿವಾರ ರಾತ್ರಿ ನಗರದ ನಂತೂರಿನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಓವರ್‌ಟೇಕ್ ಮಾಡುವ ಅವಸರದಲ್ಲಿ ಸ್ಕೂಟರ್ ಸವಾರನೊಬ್ಬ ರಸ್ತೆ ಮಧ್ಯೆ ಇದ್ದ ಒಂದು ದೊಡ್ಡ ಗುಂಡಿಗೆ ಸಿಕ್ಕು ಬಿದ್ದು ನಿಯಂತ್ರಣ ತಪ್ಪಿ ನೇರವಾಗಿ ಬಸ್ಸಿನ ಮುಂದೆ ಬಿದ್ದ ಸಂಧರ್ಭದಲ್ಲಿ ಅಪಾಯಕರ ಕ್ಷಣದಲ್ಲೂ ಸಮಯ ಪ್ರಜ್ಞೆ ಮತ್ತು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ ಬಸ್ಸಿನ ಚಾಲಕ ಶಶಿಧರ್ ರೈ ಪಡುಮಲೆ ಅವರು ತಕ್ಷಣ ಬ್ರೇಕ್ ಹಾಕಿದ ಕಾರಣ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದರು. ಈ ದೃಶ್ಯ ಬಸ್ಸಿನ ಡ್ಯಾಶ್ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಾಣ ಉಳಿಸಿದ ಬಸ್ ಚಾಲಕರಾದ ಶಶಿಧರ್ ರೈ ಪಡುಮಲೆ ರವರಿಗೆ ಅಲ್ಲಲ್ಲಿ ಅಭಿನಂದನೆಗಳು ಸಲ್ಲಿಸಲಾಗುತ್ತಿದೆ.
ಮಂಗಳದೇವಿ ಬಸ್ ನಿಲ್ದಾಣದ ಬಳಿ ಮಂಗಳೂರಿನ ಬೋಳಾರದ ಶರ್ವ (SHARVA) ಎಂಬ ಯುವಕರರ ತಂಡ ಸನ್ಮಾನಿಸಿದರು. ಹಾಗೆಯೇ ಕಾಂಗ್ರೆಸ್ ಪಕ್ಷದ ಮುಖಂಡರು ಸಹ ಶಶಿಧರ್ ರೈ ಅವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.