ಮಂಗಳೂರು: ಬ್ರ್ಯಾಂಡೆಡ್ ಕ್ರೀಡಾ ಸಾಮಾಗ್ರಿಗಳ ನಕಲಿ ಮಾರಾಟ ಪ್ರಕರಣ ಪತ್ತೆ

ಮಂಗಳೂರು: ಬ್ರ್ಯಾಂಡೆಡ್ ಕ್ರೀಡಾ ಸಾಮಾಗ್ರಿಗಳ ನಕಲಿ ಮಾರಾಟ ಪ್ರಕರಣ ಪತ್ತೆ

 

ಮಂಗಳೂರು: ಬ್ರ್ಯಾಂಡೆಡ್ ಕ್ರೀಡಾ ಸಾಮಾಗ್ರಿಗಳ ನಕಲಿಯನ್ನು ಮಾರುತ್ತಿದ್ದ ಎರಡು ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 8ಲಕ್ಷ ಮೊತ್ತದ ಸಾಮಾಗ್ರಿಗಳನ್ನು ವಶಪಡಿಸಿಕೊಂಡು, ಇಬ್ಬರು ಮಾಲಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.


ಇತ್ತೀಚೆಗೆ ಬ್ರಾಂಡ್ ಪ್ರೊಟೆಕ್ಟರ್ಸ್ ಇಂಡಿಯಾ ಪ್ರೈ.ಲಿ.ಯ ದಕ್ಷಿಣ ಭಾರತದ ಪ್ರಾದೇಶಿಕ ಮುಖ್ಯಸ್ಥರ ಸ್ಟೀಫನ್ ರಾಜ್ ನಕಲಿ ಕ್ರೀಡಾ ಸಾಮಾಗ್ರಿಗಳು ಮಾರಾಟವಾಗುತ್ತಿರುವ ಬಗ್ಗೆ ದೂರು ದಾಖಲಿಸಿದ್ದರು.

ಈ ಸಂಬಂಧ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಆ. 18 ಮತ್ತು 19ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ಸ್ಪೋರ್ಟ್ಸ್ ವಿನ್ನರ್ ಅಂಗಡಿ ಮತ್ತು ಮಂಗಳೂರಿನ ಬಂದರ್‌ನಲ್ಲಿರುವ ಮಹಾದೇವ್ ಸ್ಪೋಟ್ಸ್ ಸೆಂಟರ್‌‌ಗೆ ದಾಳಿ ಮಾಡಲಾಗಿತ್ತು. ಈ ವೇಳೆ ಕಾಸ್ಕೊ, ನಿವಿಯಾ, ಯೋನೆಕ್ಸ್ ಎಂದು ಬ್ರ್ಯಾಂಡ್‌ಗಳ ಹೆಸರಿನಲ್ಲಿ ಹಾಕಿರುವ ನಕಲಿ ಫುಟ್‌ಬಾಲ್‌ಗಳು, ವಾಲಿಬಾಲ್‌‌ಗಳು ಹಾಗೂ ಬ್ಯಾಡ್ಮಿಂಟನ್ ರಾಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.



ಸುಮಾರು 300 ನಕಲಿ ವಾಲಿಬಾಲ್‌ಗಳು, ಫುಟ್ ಬಾಲ್‌ಗಳು ಹಾಗೂ ಬ್ಯಾಡ್ಮಿಂಟನ್ ರಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ನಕಲಿ ಸ್ಪೋಟ್ಸ್ ಸಾಮಾಗ್ರಿಗಳು ಪಂಜಾಬ್‌ನ ಜಲಂಧರ್‌ನಿಂದ ಬರುತ್ತಿದೆ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ‌. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಯುತ್ತಿದೆ ಎಂದು ಡಿಸಿಪಿ ಮಿಥುನ್ ಎಚ್.ಎನ್. ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article