
ಕಾರ್ಕಳ – ಆತ್ಮಹತ್ಯೆಗೆ ಶರಣಾದ ಹೊಟೇಲ್ ಉದ್ಯಮಿ ಬೈಲೂರಿನ ಕೃಷ್ಣರಾಜ ಹೆಗ್ಡೆ
Tuesday, August 19, 2025
Edit
ಕಾರ್ಕಳ: ಹೊಟೇಲ್ ಉದ್ಯಮಿ ಸಾಮಾಜಿಕ ಧಾರ್ಮಿಕ ಮುಖಂಡರಾಗಿದ್ದ ಬೈಲೂರಿನ ಕೃಷ್ಣರಾಜ ಹೆಗ್ಡೆ (ತಮ್ಮಣ್ಣ) (45) ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ರಾಡಿಯ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಬೈಲೂರು – ಕೌಡೂರು ಮಾರಿಯಮ್ಮ ದೇವಸ್ಥಾನದ ನಾಯರ್‌ಬೆಟ್ಟು ಧಾರ್ಮಿಕ ಸೇವಾ ಸಮಿತಿಯ ಕಾರ್ಯದರ್ಶಿಯಾಗಿದ್ದ ಕೃಷ್ಣರಾಜ ಹೆಗ್ಡೆ ಅವರು ಉಡುಪಿ ಮಣಿಪಾಲದಲ್ಲಿ ಹೊಟೇಲ್ ಉದ್ಯಮ ನಡೆಸಿಕೊಂಡಿದ್ದು, ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಿರಿಯಡ್ಕ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕೃಷ್ಣರಾಜ ಹೆಗ್ಡೆ ಅವರ ನಿಧನಕ್ಕೆ ಶಾಸಕ ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದು. ಕಾರ್ಕಳ ಬೈಲೂರಿನ ಉದ್ಯಮಿ, ಆತ್ಮೀಯರಾದ ಶ್ರೀ ಕೃಷ್ಣರಾಜ ಹೆಗ್ಡೆ (ತಮ್ಮಣ್ಣ) ನಿಧನರಾಗಿರುವುದು ಅತ್ಯಂತ ದುಃಖ ಹಾಗೂ ನೋವಿನ ವಿಚಾರ.
ಯುವ ಉದ್ಯಮಿ, ಸಮಾಜ ಸೇವೆಯೊಂದಿಗೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಬೆಂಬಲಿಸುತ್ತಾ, ಬೈಲೂರು ಮಾರಿಯಮ್ಮ ದೇವಸ್ಥಾನದ ಕಾರ್ಯದರ್ಶಿಯಾಗಿ, ಅನೇಕ ವರ್ಷಗಳಿಂದ ಯಶಸ್ವಿ ಉದ್ಯಮವನ್ನು ನಡೆಸಿಕೊಂಡು ಬಂದಿದ್ದ ತಮ್ಮಣ್ಣ ಇಂದು ನಮ್ಮೊಂದಿಗೆ ಇಲ್ಲ ಅನ್ನುವುದು ನಂಬಲಸಾಧ್ಯ. ತಮ್ಮಣ್ಣ ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ.
ಅಗಲಿದ ಶ್ರೀಯುತರ ಆತ್ಮದ ಸದ್ಗತಿಗಾಗಿ ಮತ್ತು ಕುಟುಂಬ ವರ್ಗ ಹಾಗೂ ಬಂಧು ಮಿತ್ರರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಎಂದು ಹೇಳಿದ್ದಾರೆ.