
ದಿನಬಳಕೆ ಸಾಮಾಗ್ರಿಗಳ ಮೇಲಿನ ಜಿ.ಎಸ್.ಟಿ ಹಿಂಪಡೆಯವಂತೆ ಒತ್ತಾಯಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಪ್ರತಿಭಟನೆ
Monday, July 25, 2022
Edit
ದಿನಬಳಕೆ ಸಾಮಾಗ್ರಿಗಳ ಮೇಲಿನ ಜಿ.ಎಸ್.ಟಿ ಹಿಂಪಡೆಯವಂತೆ ಒತ್ತಾಯಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಪ್ರತಿಭಟನೆ
ಮಂಗಳೂರು: ದಿನಬಳಕೆ ಸಾಮಾಗ್ರಿಗಳ ಮೇಲಿನ ಜಿ.ಎಸ್.ಟಿ ಹಿಂಪಡೆಯವಂತೆ ಒತ್ತಾಯಿಸಿ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಇಂದು ವುಮೆನ್ಸ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಹಲವಾರು ವುಮೆನ್ಸ್ ಇಂಡಿಯಾ ಮೂವ್ಮೆಂಟ್ ನ ಸದಸ್ಯರು ಭಾಗವಹಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಯಾದ ಆಯುಶಾ ಬಜ್ಪೆ ಅವರು ಬೆಲೆಯೇರಿಯಿಂದಾಗಿ ಇಡೀ ದೇಶದ ನಾಗರಿಕರು ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೋದಿ ನೇತೃತ್ವದ ಸರಕಾರ ಜನಸಾಮಾನ್ಯರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮೋದಿ ಸರಕಾರ ಅಸ್ತಿತ್ವಕ್ಕೆ ಬರುವಾಗ ಮೊಟ್ಟ ಮೊದಲನೇಯದಾಗಿ ನೋಟ್ ಬ್ಯಾನ್ ಮಾಡಿ ಕಪ್ಪು ಹಣ ತರಲಾಗುವುದು ಎಂದರು. ಆದರೆ ನೋಟ್ ಬ್ಯಾನ್ ನಿಂದಾಗಿ ಯಾರಿಗೂ ಲಾಭವಾಗಿಲ್ಲ. ಜನಸಾಮಾನ್ಯರು ಪಾವತಿಸುವ ಟ್ಯಾಕ್ಸ್ ಹಣವನ್ನು 40% ಕಮಿಷನ್ ಮುಖಾಂತರ ಅವರ ದುಬಾರಿ ಜೀವನ ನಡೆಸುತ್ತಿದ್ದಾರೆ. ಮೋದಿ ಸಂದರ್ಭದಲ್ಲಿ ಬೆಲೆ ಏರಿಕೆ ಕಡಿಮೆ ಆಗುವುದೆಂಬ ಭರವಸೆ ಇಟ್ಟ ನಾವುಗಳಿಗೆ ಗ್ಯಾಸ್ ದರ 400 ರೂ. ಇದ್ದಲ್ಲಿಗೆ ಈಗ ಗ್ಯಾಸ್ ದರ ಈಗ 1,050 ರೂ. ಏರಿಕೆಯಾಗಿದೆ. ಮನ್ ಕೀ ಭಾತ್ ಹೇಳಿ ಯಾಕೆ ಮೋಡಿ ಮಾಡ್ತೀರಿ, ನಿಮ್ಮ ಹೆಸರು ಮೋದಿಯಲ್ಲ ನಿಮ್ಮ ಹೆಸರು ಮೋಡಿ ನೇ, ನೀವು ಮೋಡಿ ಮಾಡಿ ಮಾಡಿ ಜನರನ್ನು ಇಂತಹ ಪರಿಸ್ಥಿತಿಗೆ ತಂದಿದ್ದೀರಿ ಎಂದು ಪ್ರತಿಭಟನೆಯಲ್ಲಿ ಆಯಿಶಾ ಬಜ್ಪೆ ತಿಳಿಸಿದರು.
ಈ ಸಂದರ್ಭದಲ್ಲಿ ದ.ಕ.ಜಿಲ್ಲೆಯ ಎಸ್.ಡಿ.ಪಿ.ಐ ಉಪಾಧ್ಯಕದಷೆ ಮಿಶ್ರಿಯಾ ಕಣ್ಣೂರು, ಹಾಗೂ ನ್ಯಾಷನಲ್ ವಿಮೆನ್ಸ್ ಫ್ರಂಟ್ ನ ನಾಯಕಿ ಮಝಾಹಿದ ಕಣ್ಣೂರು ಹಾಗು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.