ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಶಂಕರಾಚಾರ್ಯರ Tablo ಗಳನ್ನು ಕೇಂದ್ರವೆ ಮಾಡಲಿ; ಖಾದರ್
Sunday, January 16, 2022
Edit
ಮಂಗಳೂರು; ಗಣರಾಜ್ಯೋತ್ಸವದಂದು ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಶಂಕರಾಚಾರ್ಯರ ಟ್ಯಾಬ್ಲೋಗಳನ್ನು ಕೇಂದ್ರ ಸರಕಾರವೆ ಮಾಡಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇರಳ ಸರಕಾರವು ಮಾಡಿದ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಕೇಂದ್ರ ಸರಕಾರ ತಿರಸ್ಕರಿಸಿ ಮಾನವಕುಲಕ್ಕೆ ಅವಮಾನಮಾಡಿದೆ. ಇದನ್ನು ಖಂಡಿಸುತ್ತೇನೆ.
ಇದನ್ನು ಕೇರಳ ಸರಕಾರ ಮಾಡಬೇಕೆಂದಿಲ್ಲ. ನಾರಾಯಣ ಗುರುಗಳು ದೇಶದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದವರು.ಅವರ ಹೆಸರಿನ ಟ್ಯಾಬ್ಲೋವನ್ನುಕೇಂದ್ರವೆ ಮಾಡಿ ಅವರಿಗೆ ಗೌರವ ಸಲ್ಲಿಸಬೇಕು. ಜೊತೆಗೆ ಶಂಕರಾಚಾರ್ಯರ ಟ್ಯಾಬ್ಲೋವನ್ನು ಮಾಡಲು ಕೇಂದ್ರ ಮುಂದಾಗಲಿ ಎಂದು ಹೇಳಿದರು.