ಕೋತಿಗಳ ಕಾಟ ಜನರಿಗೆ ಪ್ರಾಣಸಂಕಟ...
Wednesday, October 8, 2025
Edit
ಮಂಗಳೂರು ಅಕ್ಟೋಬರ್ 8: ನಗರದ ಮಣ್ಣಗುಡ್ಡೆಯ ಕಾಂತರಾಜ್ ಲೈನ್ ನಲ್ಲಿರುವ ನಿವಾಸಿಗಳು
ಕೋತಿಗಳ ಕಾಟದಿಂದ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.
ಮನೆಗಳ ಮೇಲೆ ಕೋತಿಗಳು ದಾಳಿ ಮಾಡಿ ಮನೆಯಲ್ಲಿರುವ ಧವಸ, ಧಾನ್ಯ, ತರಕಾರಿ, ಬಟ್ಟೆಗಳು ಹಾಗೂ ಇನ್ನಿತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತದೆ. ತಿಂಡಿ ತಿನಿಸುಗಳನ್ನು ಕಿತ್ತುಕೊಂಡು ಹೋಗುತ್ತದೆ. ಅದನ್ನು ಓಡಿಸಲು ಮನೆ ಮಾಲೀಕರು ಮುಂದಾದರೆ ಅವರಿಗೆ ಕಚ್ಚಲು ಮುಂದಾಗುತ್ತದೆ. ಕೋತಿಗಳ ಕಾಟ ಇದು ತಲೆನೋವಾಗಿ ಪರಿಣಮಿಸಿದೆ.
ಆದಷ್ಟು ಬೇಗನೆ ಸಂಬಂಧ ಪಟ್ಟವರು ಮಣ್ಣಗುಡ್ಡೆ ಪರಿಸರದಲ್ಲಿ ಹೆಚ್ಚುತ್ತಿರುವ ಕೋತಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡು ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದಬುದು ಸಾರ್ವಜನಿಕರ ಒತ್ತಾಯ.
ಕೋತಿಗಳ ಕಾಟದಿಂದ ಮಕ್ಕಳು ,
ನೆಮ್ಮದಿಯಿಂದ ಶಾಲೆಗೆ ಹೋಗಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಬರುವಾಗ ತಿಂಡಿ ತಿನಸುಗಳನ್ನುಕೊಂಡು ತಿನ್ನುವುದಕ್ಕೂ ಕೋತಿಗಳು ಬಿಡುತ್ತಿಲ್ಲ. ಬೆಳಗ್ಗೆ ಶಾಲೆಗೆ ಹೋಗುವಾಗ, ಸಂಜೆ ಶಾಲೆಯಿಂದ ಬರುವಾಗ ಕೋತಿಗಳು ಬ್ಯಾಗ್‌ಗಳನ್ನು ಕಿತ್ತುಕೊಳ್ಳಲು ಮುಗಿ ಬೀಳುತ್ತವೆ.
ಕೋತಿಗಳನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ರು ಕೂಡಾ
ಕೋತಿ ಚಾಣಾಕ್ಷದಿಂದ ತಪ್ಪಿಸಿಕೊಳ್ಳುತ್ತಿದೆ.