ಬೀದಿಬದಿ ವ್ಯಾಪಾರಿಗಳ ಸ್ವಾವಲಂಬಿ ಬದುಕಿಗಾಗಿ ಜಾರಿ ಮಾಡಿದ್ದ ಪಿ.ಎಂ. ಸ್ವನಿಧಿ ಸಾಲ ಯೋಜನೆ ಪುನಾರರಂಭಿಸಲು ಒತ್ತಾಯಿಸಿ ಪ್ರತಿಭಟನೆ
Tuesday, August 19, 2025
Edit
ಮಂಗಳೂರು: ಪಿ.ಎಂ. ಸ್ವನಿಧಿ ಸಾಲ ಯೋಜನೆ ಮುಂದುವರಿಸಿ ಸಾಲದ ಮಿತಿ ಏರಿಸಿ ಎಂದು ಆಗ್ರಹಿಸಿ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರತಸ್ಥರ ಸಂಘ ದಿಂದ ಬಳ್ಳಾಲ್ಬಾಗ್ ನಿಂದ ಲಾಲ್ಬಾಗ್ ಮಹಾ ನಗರ ಪಾಲಿಕೆಯ ತನಕ ಪಾದಯಾತ್ರೆ ಮೂಲಕ ಪ್ರತಿಭಟಿಸಲಾಯಿತು.
ಬೀದಿಬದಿ ವ್ಯಾಪಾರಿಗಳ ಸ್ವಾವಲಂಬನೆಯ ಕಿರು ಸಾಲ ಯೋಜನೆಯಾದ ಪಿ.ಎಂ. ಸ್ವನಿದಿ ಯೋಜನೆಯನ್ನು ಸರಕಾರ ತಡೆಹಿಡಿದಿರುವುದರಿಂದ ಬಡ ಬೀದಿ ವ್ಯಾಪಾರಿಗಳಿಗೆ ತೀವ್ರ ಆರ್ಥಿಕ ಸಂಕಷ್ಟ ಉಂಟಾಗಿದೆ. ಈಗಾಗಲೇ ಕಿರುಸಾಲ ಪಡೆದ ಬೀದಿ ವ್ಯಾಪಾರಿಗಳು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಬೀದಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ರೂ. 10,000 ಎರಡನೇ ಹಂತದಲ್ಲಿ ರೂ. 20,000/- ಮೂರನೇ ಹಂತದಲ್ಲಿ ರೂ. 50,000/- ಸಾಲ ವಿತರಣೆ ಮಾಡಲಾಗುತ್ತಿತ್ತು. ಆದರೆ ಕಳೆದ 7-8 ತಿಂಗಳಿನಿಂದ ಪಿ.ಎಂ. ಸ್ವನಿಧಿ ಸಾಲ ಪಡೆಯಲು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅಸಾಧ್ಯವಾಗುತ್ತಿದೆ. ನಿಯಮಿತವಾಗಿ ಸಾಲ ಮರುಪಾವತಿ ಮಾಡಿರುವ ಬೀದಿ ವ್ಯಾಪಾರಿಗಳಿಗಾಗಿ ಪಿ.ಎಂ. ಸ್ವನಿಧಿ ಯೋಜನೆ ಮುಂದುವರಿಸಬೇಕಿದೆ. ಮ.ನ.ಪಾ. ಕಚೇರಿ ಎದುರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಕಾರ್ಯಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಸಂಘದ ಗೌರವ ಅಧ್ಯಕ್ಷರಾದ ಬಿ.ಕೆ.ಇಮ್ತಿಯಾಸ್, ಸಂಘದ ಮುಖಂಡರಾದ ಮುಜಫರ್ ಅಹಮ್ಮದ್, ಸಂತೋಷ್ ಆರ್.ಎಸ್. ಮತ್ತಿತರರು ಉಪಸ್ಥಿತರಿದ್ದರು.