ಮಂಗಳೂರು: ಧ್ವನಿವರ್ಧಕಕ್ಕೆ ಅನುಮತಿ ನಿರಾಕರಣೆ: ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ಆಕ್ರೋಶ

ಮಂಗಳೂರು: ಧ್ವನಿವರ್ಧಕಕ್ಕೆ ಅನುಮತಿ ನಿರಾಕರಣೆ: ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ಆಕ್ರೋಶ


ಮಂಗಳೂರು:ಧ್ವನಿವರ್ಧಕಕ್ಕೆ ಅನುಮತಿ ನಿರಾಕರಣೆ ಗೆ ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಧನರಾಜ್ ಶೆಟ್ಟಿ ಅವರು ನಮ್ಮ ಜಿಲ್ಲೆಯಲ್ಲಿ ನಡೆಯುವ ಅನೇಕ ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಧ್ವನಿ ಮತ್ತು ಬೆಳಕು ಅಗತ್ಯ. ಇದನ್ನು ಪೂರೈಸುವ ಕಾರ್ಯವನ್ನು ನಮ್ಮ ಜಿಲ್ಲೆಯಲ್ಲಿ ಅನೇಕ  ಮಂದಿ ಉದ್ಯೋಗದ ರೀತಿಯಲ್ಲಿ ನಡೆಸುತ್ತಿದ್ದೇವೆ. ಈ ಎಲ್ಲಾ ಮಾಲಕರನ್ನು ಒಗ್ಗೂಡಿಸಿಕೊಂಡು ಕಟ್ಟಿಕೊಂಡು ಬಂದಿರುತ್ತದೆ ನಮ್ಮ ಸಂಸ್ಥೆ. ನಮ್ಮ ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ (ರಿ) ವು ದಕ್ಷಿಣ ಕನ್ನಡ ಜಿಲ್ಲೆ ಹಲವಾರು ವರ್ಷಗಳಿಂದ ನಮ್ಮ ಜಿಲ್ಲೆಯಲ್ಲಿ ನಡೆಯುವ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಬೇಕಾದ ಧ್ವನಿ ಮತ್ತು ಬೆಳಕಿನ ಸಂಬಂಧಪಟ್ಟ ಪರಿಕರಗಳನ್ನು ಪೂರೈಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತೇವೆ ಎಂದರು.


ನಮ್ಮ ಜಿಲ್ಲೆಯ ಈ ಸಂಘದಲ್ಲಿ ಸುಮಾರು 1300 ಕ್ಕಿಂತಲೂ ಅಧಿಕ ಸದಸ್ಯರಿದ್ದು ಎಲ್ಲರು ಈ ಉದ್ಯೋಗವನ್ನೇ ನಂಬಿ ಸ್ವಉದ್ಯೋಗವನ್ನಾಗಿಸಿ ತಮ್ಮ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಇವರೊಂದಿಗೆ ಸುಮಾರು 6000 ಕ್ಕೂ ಅಧಿಕ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಅವರ ಮನೆಗೂ ಈ ಉದ್ಯೋಗವೇ ಆಧಾರ ಸ್ತಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಆದ ಬೆಳವಣಿಗೆಗಳ ಪ್ರಕಾರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮಕ್ಕೆ ಅನುಗುಣವಾಗಿ ಬೇಕಾಗಿರುವ ಧ್ವನಿವರ್ಧಕ ವ್ಯವಸ್ಥೆ ಪೂರೈಸುವಲ್ಲಿ ಸರಕಾರವು ಕಟ್ಟುನಿಟ್ಟಿನ ಕ್ರಮ ವಹಿಸಿಕೊಂಡಿದ್ದು ಕಾರ್ಯಕ್ರಮದ ಅನುಕೂಲತೆ, ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಅಲ್ಲಿ ಸೇರುವ ಜನಸಂಖ್ಯೆಯ ಲೆಕ್ಕಾಚಾರದಲ್ಲಿ ಧ್ವನಿವರ್ಧಕ ವ್ಯವಸ್ಥೆ ಪೂರೈಸುವುದನ್ನು ಪೊಲೀಸ್ ಇಲಾಖೆಯು ತಡೆಹಿಡಿಯಲಾಗಿದ್ದು ಇದರಿಂದ ನಮಗೆ ಮತ್ತು ಕಾರ್ಯಕ್ರಮ ಆಯೋಜಕರಿಗೆ ಮತ್ತು ಕಲಾವಿದರಿಗೆ ಅನೇಕ ತೊಂದರೆಯುಂಟಾಗಿರುತ್ತದೆ ಎಂದರು.

ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಲಾವಿದರಿದ್ದು ಅವರ ಪ್ರತಿಭಾ ಪ್ರದರ್ಶನಕ್ಕೆ ಹಾಗೂ ಕಲಾವೃತ್ತಿಗೆ ಆ ಪ್ರಕಾರ ಧ್ವನಿವರ್ಧಕ ಪೂರೈಸಲು ಅನುಮತಿ ಇಲ್ಲದೆ ಇರುವುದರಿಂದ ಕಲಾವಿದರು ಕಾರ್ಯಕ್ರಮ ನೀಡಲಾಗದೆ ತಮ್ಮ ಆದಾಯಕ್ಕೂ ಪರದಾಡುವಂತಾಗಿದೆ ಎಂದರು.


ಈ ಎಲ್ಲಾ ವಿಷಯಗಳನ್ನು ಮನಗಂಡು ಇನ್ನು ಮುಂಬರುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೇರುವ ಜನಸಂಖ್ಯೆ, ಸ್ಥಳ ಹಾಗೂ ಕಾರ್ಯಕ್ರಮದ ಅವಶ್ಯಕತೆಗೆ ತಕ್ಕಂತೆ ಧ್ವನಿವರ್ಧಕ ಬಳಸಲು ಅವಕಾಶ ನೀಡದೆ ಇದ್ದಲ್ಲಿ ನಾವು ಸಂಸ್ಥೆಯ ಮಾಲಕರಾಗಿ ಹಾಗೂ ಸಂಘದ ಸದಸ್ಯರಾಗಿ ಎಲ್ಲರ ಒಮ್ಮತದ ಅಭಿಪ್ರಾಯದೊಂದಿಗೆ ಮುಂದೆ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಂದರೆ ಯಾವುದೇ ರೀತಿಯ ಧ್ವನಿವರ್ಧಕವನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ನೀಡುವುದಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತಿದ್ದೇವೆ ಎಂದರು.

ಆದುದರಿಂದ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರಕಾರವು ನಮ್ಮ ಪರಿಸ್ಥಿತಿಯನ್ನು ಮನಗಂಡು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಪರಿಹಾರಕ್ಕೆ ಶ್ರಮಿಸುವಂತೆ ಪತ್ರಿಕಾ ಗೋಷ್ಠಿಯ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ  ಸ್ಥಾಪಕಾಧ್ಯಕ್ಷರಾದ ಅಶೋಕ್ ಕುಮಾರ್ ಬಿ, ಪ್ರ.ಕಾರ್ಯದರ್ಶಿ ಮಹೇಶ್ ಬೋಳಾರ್ ಎಲ್.ಎಂ, ಜಿಲ್ಲಾ ಗೌರವಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರ್ ಮೊದಲಾದವರು  ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article