ಮಂಗಳೂರಿನ ಕಡೆಗೆ ಬರುತ್ತಿದ್ದ ಕಾರು ಸಂಪೂರ್ಣ ಬೆಂಕಿಗಾಹುತಿ
Thursday, September 5, 2024
Edit
ಮಂಗಳೂರು: ಸುರತ್ಕಲ್ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಸುರತ್ಕಲ್ ಎನ್ಐಟಿಕೆ ಬಳಿ ಸರಿ ಸುಮಾರು ಬೆಳಿಗ್ಗೆ 10 ಘಂಟೆ ಸಂದರ್ಭ ಚಲಿಸುತ್ತಿದ್ದ ಕಾರಿನಲ್ಲಿ ಸ್ಥಳಿಯರಿಗೆ ಬೆಂಕಿ ಕಾಣಿಸಿ ಕೊಂಡಿದೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಇದನ್ನು ಅವರು ತಿಳಿಸಿ ಕಾರು ನಿಲ್ಲಿಸಲು ಹೇಳಿ ನೋಡುವಾಗ ಬ್ಯಾಟರಿ ಶಾರ್ಟ್ ನಿಂದಾಗಿ ಬೆಂಕಿ ಹತ್ತಿ ಉರಿಯತೊಡಗಿದೆ. ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು ಅಧಿಕಾರಿಗಳು ಬೆಂಕಿ ನಂದಿಸಲು ಸತತ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಕಾರು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.